ಕಾರ್ಗಿಲ್ ವಿಜಯದಲ್ಲಿ ಸಾವಿರಾರು ಯೋಧರ ಬಲಿದಾನವಿದೆ: ಕರಿಗೌಡ್ರ
ಗದಗ: 15 ವರ್ಷದ ಹಿಂದೆ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ಸಾವಿರಾರು ಯೋಧರ ಬಲಿದಾನವಾಗಿದ್ದು, ಈ ವಿಜಯದ ಹಿಂದೆ ಸಾಕಷ್ಟು ರಕ್ತಸಿಕ್ತ ಅಧ್ಯಾಯವಿದೆ ಎಂದು ಜಿಲ್ಲಾ ಬಿಜೆಪಿ ಉಸ್ತುವಾರಿ ಎಂ.ಎಸ್. ಕರಿಗೌಡ್ರ ಹೇಳಿದರು.
ಅವರು ಶನಿವಾರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿದ ಕಾರ್ಗಿಲ್ ವಿಜಯೋತ್ಸವ ಹಾಗೂ ಗೊರಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ ಮಾತನಾಡಿ, 1948ರ ಸೆ. 17ರಂದು ಹೈದ್ರಾಬಾದ್ ಕರ್ನಾಟಕಕ್ಕೆ ಸ್ವಾತಂತ್ರ್ಯ ದೊರೆಯಿತು. ಅದರಲ್ಲಿ ಹೈದ್ರಾಬಾದ್ ನಿಜಾಮರ ಸೋಲಿಸಿ 5 ಜಿಲ್ಲೆಗಳಿಗೆ ಸ್ವಾತಂತ್ರ್ಯ ಕೊಡಿಸಿದವರು ಸರ್ದಾರ ವಲ್ಲಭಭಾಯಿ ಪಟೇಲರು. ಅದರ ಸ್ಮರಣಾರ್ಥವಾಗಿ ಗೊರಟ ಗ್ರಾಮದಲ್ಲಿ ಪಟೇಲರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಯುವ ಮೋರ್ಚಾ ಅದರ ನೇತೃತ್ವ ವಹಿಸಲಿದೆ ಎಂದರು. ಗನರಾಜ ಪುರೋಹಿತ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಿವನಗೌಡ ಹಿರೇಮನಿ ಪಾಟೀಲ, ಸಂತೋಷ ಕಬಾಡರ ಅವರನ್ನು ನಿಧಿ ಸಂಗ್ರಹದ ಜಿಲ್ಲಾ ಪ್ರಮುಖ ಹಾಗೂ ಸಹ ಪ್ರಮುಖರಾಗಿ ನೇಮಿಸಲಾಯಿತು. ಶಹರ ಪ್ರಮುಖರಾಗಿ ಮಂಜುನಾಥ ಮೂರ್ಖಂಡಿ ಹಾಗೂ ಸಹ ಪ್ರಮುಖರಾಗಿ ಪವನ ಬಾಕಳೆ ಅವರನ್ನು ನೇಮಿಸಲಾಯಿತು. ಅರುಣ ತಡಸದ ಜಿಲ್ಲಾ ಮೀಡಿಯಾ ಪ್ರಮುಖರಾಗಿ ನೇಮಿಸಲಾಯಿತು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ, ಲಿಂಗನಗೌಡ ಹರ್ತಿ, ವಿಜಯ ಮುನವಳ್ಳಿ, ಸಿದ್ರಾಮೇಶ ಹಿರೇಮಠ ಇದ್ದರು.