ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಿಸಿ
ಗದಗ-ಬೆಟಗೇರಿ ಅವಳಿ ನಗರದ ಹೆಸರಿನಲ್ಲಿ ಒಂದು ಟ್ರಾಫಿಕ್ ಪೊಲೀಸ್ ಠಾಣೆ ಇರುವುದು ನಿಜ. ಆದರೆ ಅದರ ಕಾರ್ಯವ್ಯಾಪ್ತಿ ಕೇವಲ ಗದಗದಲ್ಲಿ ಮಾತ್ರ. ಇತ್ತಿಚಿಗೆ ಅವಳಿ ನಗರ ಪ್ರತಿಯೊಂದು ದಿಕ್ಕಿನಲ್ಲಿ ಬೆಳೆಯುತ್ತಿದೆ. ಆದರೆ ಬೆಟಗೇರಿಯಲ್ಲಿ ಟ್ರಾಫಿಕ್ ಪೊಲೀಸರು ಇರುವುದಿಲ್ಲ. ಹೆಚ್ಚಿನ ಶಾಲಾ, ಕಾಲೇಜು, ರೇಲ್ವೆ ನಿಲ್ದಾಣ ಇರುವುದು ಬೆಟಗೇರಿಯಲ್ಲಿ. ಬೆಟಗೇರಿಯಲ್ಲಿ ಯಾವೊಬ್ಬ ಟ್ರಾಫಿಕ್ ಪೊಲೀಸರಾಗಲಿ ಅಥವಾ ಟ್ರಾಫಿಕ್ ಪಿಎಸ್‌ಐ ಗಳಾಗಲಿ ಕಾಣುವುದು ವಿರಳ. ಆದ್ದರಿಂದ ಬೆಟಗೇರಿ ಭಾಗಕ್ಕೆ ವಿಶೇಷವಾಗಿ ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪಿಸುವುದು ಅವಶ್ಯಕ.
ಗದಗ-ಬೆಟಗೇರಿ ಅವಳಿ ನಗರದ ಸಂಚಾರ ಜನದಟ್ಟನೆ ಅನುಗುಣವಾಗಿ ಇರಬೇಕಾದ ಸಿಬ್ಬಂದಿ ಇರುವುದಿಲ್ಲ. ಶೇ. 60ರಷ್ಟು ಗದಗ ಹಾಗೂ ಶೇ. 40ರಷ್ಟು ಬೆಟಗೇರಿಗೆ ಸಿಬ್ಬಂದಿ ನೇಮಿಸಬೇಕು. ಜತೆಗೆ ಉಪಟ್ರಾಫಿಕ್ ಪೊಲೀಸ್ ಠಾಣೆ ಬೆಟಗೇರಿ ಪೊಲೀಸ್ ಠಾಣೆ ಹೊಂದಿಕೊಂಡು ಪ್ರಾರಂಭಿಸಬೇಕು. ಈ ಕುರಿತು ಸಾರ್ವಜನಿಕರ ಸಭೆ ಕರೆದು ಅವರ ಸಲಹೆ ಪಡೆದು ನೇಮಿಸಬೇಕು.
-ಗಣೇಶಸಿಂಗ್ ಬ್ಯಾಳಿ
ಬೆಟಗೇರಿ ನಿವಾಸಿ