ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮುದಾಯದ ಬಗ್ಗೆ ಕಾಳಜಿ ಇರಲಿ: ಸಿ.ಎಂ. ಉದಾಸಿ

Lingaraj Badiger
Updated On : 28 Jul 2014, 10:44 am

ಗದಗ: ರಾಜಕೀಯ ಒತ್ತಡದಲ್ಲಿ ಮತ್ತು ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಸ್ವಂತ ಸಮಾಜವನ್ನು ಕಡೆಣಿಸುವ ಘಟನೆಗಳು ಸಾಮಾನ್ಯವಾಗಿದ್ದು, ಇತರರಿಗೆ ನೋವಾಗದಂತೆ ನಮ್ಮ ಸಮಾಜ ಕಟ್ಟುವ ಕೆಲಸಕ್ಕೆ ನಾವೆಲ್ಲಾ ಮುಂದಾಗಬೇಕು ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಹೇಳಿದರು.
ಅವರು ಭಾನುವಾರ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಗದಗ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವ್ಯಾಪಾರವನ್ನೇ ಪ್ರಮುಖವಾದ ಉದ್ಯೋಗವನ್ನಾಗಿಸಿಕೊಂಡಿರುವ ಬಣಜಿಗ ಸಮುದಾಯದವರು ಪ್ರಸ್ತುತವಿರುವ ಶೈಕ್ಷಣಿಕ ಸವಾಲು ಎದುರಿಸಲು ಮುಂದಾಗಬೇಕಿದೆ. ಆರ್ಥಿಕವಾದ ಪ್ರಗತಿಯ ಮೂಲಕ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದರು.
ಕಾಪನಹಳ್ಳಿ ಕೆ.ಆರ್. ಪೇಟಿ ತಾಲೂಕಿನ ದಕ್ಷಿಣ ಕಾಶಿಯ ಶ್ರೀಗವಿಮಠದ ಪೀಠಾಧಿಪತಿ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಗದಗ ತಾಲೂಕು ಅಧ್ಯಕ್ಷ ವಿರೂಪಾಕ್ಷ ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಲವಾರು ಗಣ್ಯರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ವಿಪ ಸದಸ್ಯ ಎಸ್.ವಿ. ಸಂಕನೂರ, ವಿ.ಆರ್.ಎಲ್. ಸಮೂಹ ಸಂಸ್ಥೆಯ ಚೇರ್‌ಮನ್ ಡಾ. ವಿಜಯ ಸಂಕೇಶ್ವರ, ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಂ.ವಿ. ಗೊಂಡಶಟ್ಟಿ, ರಾಜ್ಯಾಧ್ಯಕ್ಷ ಸಿದ್ದಣ್ಣ ಸಕ್ರಿ, ಗದಗ ಜಿಲ್ಲಾಧ್ಯಕ್ಷ ಅಂದಾನಪ್ಪಾ ಪಟ್ಟಣಶೆಟ್ಟಿ, ಗಂಗಣ್ಣಾ ಕೋಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement