ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ

Rashmi Kasaragodu
Updated On : 29 Jul 2014, 11:20 am

ಕನ್ನಡಪ್ರಭ ವಾರ್ತೆ, ನರೇಗಲ್ಲ, ಜು. 28
ರಾಜ್ಯದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರಗಳು ನಿರಂತರ ನಡೆದಿದ್ದು, ಇದನ್ನು ತಡೆದು ಸರ್ಕಾರ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಶಾರದಾ ಮಹಿಳಾ ಮಂಡಳದ ಅಧ್ಯಕ್ಷೆ ಶಾಂತಕ್ಕ ಕೋರಧಾನ್ಯಮಠ ಆಗ್ರಹಿಸಿದರು.
ಅವರು ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಸ್ಥಳೀಯ ನಾಡಕಚೇರಿಯ ಉಪತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದರು.
ಹಳೆಬಜಾರ್‌ದಿಂದ ಜಾಥಾ ಮೂಲಕ ನಾಡ ಕಚೇರಿಗೆ ಆಗಮಿಸಿ ಉಪತಹಸೀಲ್ದಾರ್ ಪರವಾಗಿ ಸಹಾಯಕ ಅಧಿಕಾರಿ ಎಸ್.ಎಸ್. ತಿಮ್ಮನಗೌಡರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಶಾರದಾ ಮಹಿಳಾ ಮಂಡಳದ ಕಾರ್ಯದರ್ಶಿ ಶೋಭಾ ಪಲ್ಲೇದ, ಶೋಭಾ ಗುರುವಡೆಯರ, ತಾರಕ್ಕ ತೊಂಡಿಹಾಳ, ಗೀತಾ ಚಿಕ್ಕೊಪ್ಪ, ಗೀತಾ ಬೆಟಗೇರಿ, ಈರಮ್ಮ ಕಂಬಾಳಿಮಠ, ಲಕ್ಷ್ಮವ್ವ ಎಮ್ಮಿ, ಬಸವ್ವ ಬೊಳುಟಗಿ, ಚನ್ನಮ್ಮ ಬೆಟಗೇರಿ, ಲಕ್ಷ್ಮಿ ಚಿಕ್ಕೊಪ್ಪ, ಕಳಕವ್ವ ಪಾಯಪ್ಪಗೌಡ್ರ, ರೇಕಾ ದಿಂಡೂರ, ಹೊಸಮನಿ, ಮಹಾದೇವಿ ಕೊಂಡಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement