ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜನಸಂಖ್ಯೆ ನಿಯಂತ್ರಣ ಹೆಚ್ಚಿನ ಪ್ರಚಾರವಾಗಲಿ

Rashmi Kasaragodu
Updated On : 29 Jul 2014, 11:21 am

ನರಗುಂದ: ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ 2ನೇ ಸ್ಥಾನ ಹೊಂದಿದು, ಅದಕ್ಕೆ ಇಂದಿನಿಂದಲೇ ಜಾಗ್ರತರಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಹೆಚ್ಚಿನ ಪ್ರಚಾರ ಕಾರ್ಯ ಮಾಡಬೇಕಾಗಿದೆ ಎಂದು ಜಿಪಂ ಅಧ್ಯಕ್ಷೆ ಶಾಂತಾ ದಂಡಿನ ಹೇಳಿದರು.
ಅವರು ಪಟ್ಟಣದ ತಾಲೂಕು ಆರೋಗ್ಯ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಜಿಪಂ, ತಾಪಂ, ತಾಲೂಕು ಆರೋಗ್ಯ ಕಾರ್ಯಾಲಯ, ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಪುರಸಭೆ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಇಂದು ಜನಸಂಖ್ಯೆ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಸರ್ಕಾರ ಜನಸಂಖ್ಯೆ ನಿಯಂತ್ರಣದ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ವರ್ಷಕ್ಕೊಂದು ಬಾರಿ ಈ ಕುರಿತು ವಿಚಾರ ಮಾಡಿದರೆ ಸಾಲದು, ಜನರಿಗೆ ಜನಸಂಖ್ಯೆ ನಿಯಂತ್ರಣ ಗ್ರಾಮೀಣ ಭಾಗದಲ್ಲಿ ವರ್ಷವಿಡೀ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದರು.
ಡಾ. ಗಿರೀಶ ಮರಡ್ಡಿ ಮಾತನಾಡಿ, ಇಂದು ಪ್ರತಿ ದಿನ ಜನಸಂಖ್ಯೆ ಬೆಳೆಯುತ್ತಾ ಹೋಗುತ್ತಿದೆ. ಆದರೆ, ಭೂಮಿ ಮಾತ್ರ ಇದ್ದಷ್ಟೇ ಇದೆ. ಹೀಗಾಗಿ ದೇಶದ ಹಿತದೃಷ್ಟಿಯಿಂದ ಜನಸಂಖ್ಯೆ ನಿಯಂತ್ರಣ ಮಾಡಲು ಮುಂದಾಗಬೇಕಾಗಿದೆ ಎಂದರು. ಡಾ. ಎಸ್.ಎ. ವಸ್ತ್ರದ, ಡಾ. ರೇಣುಕಾ ಕೊರನವರ, ಅಶ್ವಿನಿ ಹಳ್ಳದ, ಸಿ.ಡಿ. ಜಾಲಿಕೊಪ್ಪ, ಬಿ.ಕೆ. ನದಾಫ್, ಹಣಗಿ, ವಿಠಲ ಶಿಂದೆ, ನಿಂಗಪ್ಪ ಮೊರಬದ, ಎಫ್.ವೈ. ದೊಡಮನಿ, ಎಂ.ಬಿ. ಅರಹುಣಿಸಿ, ಶಿದ್ದಪ್ಪ ಬೆನ್ನುರ, ಸಿಡಿಪಿಒ ಎಸ್.ಬಿ. ಮುದರಡ್ಡಿ, ಡಾ. ಕರಮಡಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement