ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪೀಠಾರೋಹಣ 40ನೇ ವಾರ್ಷಿಕೋತ್ಸವ ಇಲ್ಲ: ಶ್ರೀ

Rashmi Kasaragodu
Updated On : 29 Jul 2014, 11:20 am

ಗದಗ: ಮುಂಡರಗಿ ಶ್ರೀಮಠದ ಮಹಾದ್ವಾರ ಉದ್ಘಾಟನೆ ಹಾಗೂ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಇ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ನಮ್ಮ ಪೀಠಾರೋಹಣದ 40ನೇ ವಾರ್ಷಿಕೋತ್ಸವ ನೆರವೇರುವದೆಂದು ವರದಿಯಾಗಿದೆ. ಈ ಕಾರ್ಯಕ್ರಮಕ್ಕೆ ಹಾಗೂ ಪೀಠಾರೋಹಣಕ್ಕೂ ಸಂಬಂಧವಿಲ್ಲ ಇಲ್ಲಿಯ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. 38 ವರ್ಷಗಳ ಹಿಂದೆ ಅಡ್ಡಪಲ್ಲಕ್ಕಿ ಮೆರವಣಿಗೆಯನ್ನು ನಾವು ತ್ಯಜಿಸಿದ್ದೇವೆ. ಅಡ್ಡಪಲ್ಲಕ್ಕಿ ಉತ್ಸವ, ಜನ್ಮದಿನೋತ್ಸವ ಮತ್ತು ಪೀಠಾಧಿಕಾರದ ವಾರ್ಷಿಕೋತ್ಸವ ಆಚರಣೆ ತಮ್ಮ ನಿಲುವಿಗೆ ವಿರುದ್ಧವಾಗಿದೆ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಆದಿಚುಂಚನಗಿರಿ ಶ್ರೀಗಳು ಮೊದಲ ಬಾರಿಗೆ ಈ ಭಾಗಕ್ಕೆ ಬರುತ್ತಿರುವುದರಿಂದ ಉಳಿದ ಕಾರ್ಯಕ್ರಮಗಳೊಂದಿಗೆ ಅವರ ಸನ್ಮಾನ ನೆರವೇರಲಿದೆ ಎಂದು ಶ್ರೀಗಳು ಹೇಳಿದ್ದಾರೆ.
ಶ್ರಾವಣ ಸಂಜೆಯಲ್ಲಿ ಇಂದು
ಲಕ್ಷ್ಮೇಶ್ವರ:  ಪಟ್ಟಣದ ಸಿದ್ದೇಶ್ವರ ಸತ್ಸಂಗ ಬಳಗ ಹಾಗೂ ಇತರ ಸಂಘಟನೆಗಳು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ 29ರ  ಸಂಜೆ 6ಕ್ಕೆ ಪರ್ವತ ಮಲ್ಲಯ್ಯ ದೇವಸ್ಥಾನದ ಆವರಣದಲ್ಲಿ ಜರುಗುವ ಶ್ರಾವಣ ಸಂಜೆಯಲ್ಲಿ ವಿಶ್ವ ಸಂತ ಶಿಶುನಾಳ ಶರೀಫ ಶಿವಯೋಗಿಗಳ ಕುರಿತು ಶಿಕ್ಷಕ ಎಸ್.ಬಿ. ಅಂಗಡಿ ಉಪನ್ಯಾಸ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸೋಮಣ್ಣ ಮಹಾಜನಶೆಟ್ಟರ ವಹಿಸುವರು. ಮುಖ್ಯ ಅತಿಥಿಗಳಾಗಿ ಶಿದ್ಲಿಂಗಪ್ಪ ಮಾನ್ವಿ, ಬಸವೇಶ ಮಹಾಂತಶೆಟ್ಟರ, ರಾಮರಾವ್ ವೆರ್ಣೇಕರ್, ನಾಗರಾಜ ಬಿಂಕದಕಟ್ಟಿ ಆಗಮಿಸಲಿದ್ದಾರೆ ಎಂದು ಅಧ್ಯಕ್ಷೆ ಪ್ರೇಮಕ್ಕ ಬಿಂಕದಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾದ್ಯಮೇಳ ಸಮರ್ಪಣೆ ಇಂದು
ಗದಗ:  ಸ್ಥಳೀಯ ಬಸವೇಶ್ವರ ನಗರದ ವೀರಭದ್ರ ದೇವಸ್ಥಾನಕ್ಕೆ ವಾದ್ಯಮೇಳ ಸಮರ್ಪಣಾ ಕಾರ್ಯಕ್ರಮವು ಜು. 29 ರಂದು ಬೆಳಗ್ಗೆ 10ಕ್ಕೆ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಸುಮಿತ್ರಾ ಅರಳಿ ಅವರು ವಾದ್ಯಮೇಳವನ್ನು ದೇವಸ್ಥಾನಕ್ಕೆ ದೇಣಿಗೆಯಾಗಿ ಸಮರ್ಪಿಸಲಿದ್ದು, ಹಿರಿಯ ವಾಣಿಜೋದ್ಯಮಿ ಮೃತ್ಯುಂಜಯ ಸಂಕೇಶ್ವರ ಕಾರ್ಯಕ್ರಮ ಉದ್ಘಾಟಿಸುವರು. ರಾಚಪ್ಪ ಮಿಣಜಗಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶಿವಪುತ್ರಪ್ಪ ಶಿವಶಿಂಪಿಗೇರ, ವೀರಪ್ಪ ಕಾರಕಟ್ಟಿ, ಶಿವಪುತ್ರಪ್ಪ ಬೇವಿನಮರದ, ಶಿದ್ಲಿಂಗಪ್ಪ ಪಿಳ್ಳಿ, ಸುರೇಶ ಶಿರಿಗಣ್ಣವರ, ಶಂಕರಲಿಂಗಪ್ಪ ಮುನವಳ್ಳಿ, ದಾನಪ್ಪ ತಡಸದ, ಶಿವಣ್ಣ ಇಟಗಿ, ಮಹೇಶ ಗಡಾದ, ಎಸ್.ಪಿ. ಸಂಶಿಮಠ ಮುಂತಾದವರು ಆಗಮಿಸುವರು. ಇದೇ ಸಂದರ್ಭದಲ್ಲಿ ವರದಾನೇಶ್ವರಿ ಮಹಿಳಾ ಮಂಡಳದಿಂದ ವಚನ ಹಾಗೂ ಲಲಿತ ಸಹಸ್ರ ನಾಮಾವಳಿ ಪಠಣ ನಡೆಯಲಿದೆ ಎಂದು ತೊಂಟೇಶ ಬೇವಿನಮರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನೀರು ಪೂರೈಕೆ ಮಾಹಿತಿ
ಗದಗ: ಮಸಾರಿ ಭಾಗ, ಕೆ.ಸಿ. ರಾಣಿ ರೋಡ್, ವಾಟ್ವೆ ಎಂಜಿನಿನಿಯರ್ ಲೈನ್, ಮಾಳಗೊಂಡ ವಕೀಲರ ಲೈನ್, ಹುಬ್ಬಳ್ಳಿಮಠ ಲೈನ್, ಧರ್ಮಾಯತ ಲೈನ್, ರೋಣದ ವಕೀಲರ ಲೈನ್, ಚಾಪೇಕರ ಲೈನ್, ಹೊಂಬಾಳಿ ಲೈನ್, ಮಾನ್ವಿ ಲೈನ್, ವಿವೇಕಾನಂದ ರೋಡ್, ಜೆ.ಟಿ. ಕಾಲೇಜು ರೋಡ್, ಸ್ಟೇಡಿಯಂ ಭಾಗ, ಮುಲ್ಲಾ ಚಾಳ, ಕಲಕೇರಿ ಚಾಳ, ವೆಂಕಟೇಶ ಟಾಕೀಜ್ ರೋಡ್, ಟ್ಯಾಗೋರ್ ರೋಡ್ ಈ ಭಾಗಗಳಲ್ಲಿ ಮಂಗಳವಾರ ನೀರು ಪೂರೈಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement