ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮೂಡಲಪಾಯ ದೊಡ್ಡಾಟ ತಾಲೀಮು

Rashmi Kasaragodu
Updated On : 29 Jul 2014, 11:21 am

 ಶಂಕರ ಗುರಿಕಾರ
ಕನ್ನಡಪ್ರಭ ವಾರ್ತೆ, ಗದಗ, ಜು. 28
ಸಂಗೀತ, ಸಾಹಿತ್ಯ, ಸಾಂಸ್ಕೃತಿಕ, ಕಲೆ, ಕ್ರೀಡೆ, ನಾಟಕ, ಮುದ್ರಣ, ಮಹಾತಪಸ್ವಿಗಳನ್ನು ನಾಡಿಗೆ ನೀಡಿದ ವೀರನಾರಾಯಣನ ಬೀಡು ಗದಗ ದೊಡ್ಡಾಟ ರಂಗತರಬೇತಿ ನೀಡುವ ಮೂಲಕ ಹೊಸ ಮೈಲುಗಲ್ಲೊಂದನ್ನು ಸ್ಥಾಪಿಸುತ್ತಿದೆ.
ಗ್ರಾಮರಂಗ ಮೂಡಲಪಾಯ ದೊಡ್ಡಾಟ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಇಂಗಳಗಿ ಜಂಟಿಯಾಗಿ ಸಂಯೋಜಿಸಿರುವ ಮೂಡಲಪಾಯ ದೊಡ್ಡಾಟ ರಂಗತರಬೇತಿಯನ್ನು ಜು. 20ರಿಂದ ಜು. 29ರ ವರೆಗೆ ನೀಡುತ್ತಿದೆ. ನಾಟಕಗಳಲ್ಲಿ ದೊಡ್ಡಾಟ, ಬಯಲಾಟ, ಸಾಮಾಜಿಕ, ಏಕಾಂಕ, ಯಕ್ಷಗಾನ ಮುಂತಾದ ಪ್ರಕಾರಗಳುಂಟು. ಅದರಲ್ಲೂ ಉತ್ತರ ಕರ್ನಾಟಕದ ಮೂಡಲಪಾಯ ದೊಡ್ಡಾಟದಲ್ಲಿ ವಿಶೇಷತೆ ಇದೆ. ಇದರಲ್ಲಿ ಹಿಮ್ಮೇಳದ ಹಾಡುಗಳು ಜನರನ್ನು ಮೈಮನಸ್ಸನ್ನು ತುಂಬಿ ಮೂಕ ವಿಸ್ಮಿತರನ್ನಾಗಿಸುತ್ತವೆ.್ನ ಇಂಥ ಹಿರಿಮೆ-ಗರಿಮೆಯುಳ್ಳ ದೊಡ್ಡಾಟದ ರಂಗತರಬೇತಿ ಗದುಗಿನಲ್ಲಿ ನಡೆಯುತ್ತಿರುವುದು ವಿಶೇಷ.
ರಂಗತರಬೇತಿ ಉದ್ದೇಶ
ತಂತ್ರಜ್ಞಾನ ಬೆಳೆದಂತೆಲ್ಲ ಹಿಂದೂ ಸಂಸ್ಕೃತಿಯ ಪ್ರತೀಕ ಪ್ರತೀಕವಾದ ನಾಟಕ ಪರಂಪರೆ ಕ್ಷೀಣಿಸುತ್ತಾ ಬಂತು. ಅದರಲ್ಲೂ ದೊಡ್ಡಾಟಗಳು ನೋಡಲಿಕ್ಕೆ ಸಿಗುವುದೇ ಅಪರೂಪವಾಗುತ್ತಿವೆ. ಜಾಗತೀಕರಣದ ಭರಾಟೆಗೆ ಸಿಲುಕಿದ ಪ್ರತಿಯೊಬ್ಬರೂ ಸಮಯವಿಲ್ಲದಂತೆ ವರ್ತಿಸುತ್ತಿದ್ದಾರೆ. ಸಂಸ್ಕೃತಿಯ ಉಳಿಸಿ ಮುಂದಿನ ಪೀಳಿಗೆಗಾಗಿ ಯುವಕರಿಗೆ ರಂಗತರಬೇತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ.
ಶ್ರೀ ಜಗದ್ಗುರು ತೋಂಟದಾರ್ಯ ಸಿದ್ಧಲಿಂಗ ಶ್ರೀಗಳ ಆಶ್ರಯ, ಗದಗ ಜಿಲ್ಲೆಯ ನಾನಾ ಸಾಂಸ್ಕೃತಿಕ ಸಂಘಟನೆಗಳ ಸಹಯೋಗದೊಂದಿಗೆ ಜಾನಪದ ವಿದ್ವಾಂಸ ಡಾ೤ ಬಸವರಾಜ ಮಲಶೆಟ್ಟಿ ಸ್ಮರಣಾರ್ಥ ಯುವಕಲಾವಿದರಿಗೆ ದೊಡ್ಡಾಟದ ರಂಗತರಬೇತಿ ನೀಡಲಾಗುತ್ತದೆ. ತೋಂಟದಾರ್ಯ ಮಠದಿಂದ ಪ್ರತಿನಿತ್ಯ ಊಟ, ವಸತಿ, ರಂಗತರಬೇತಿಗೆ ಕಲ್ಯಾಣಮಂಟಪವನ್ನು 10 ದಿನಗಳ ವರೆಗೆ ಉಚಿತವಾಗಿ ನೀಡಲಾಗಿದೆ.
ಹಿರಿಯ ಕಲಾವಿದರು ಯುವಕರಿಗೆ ತರಬೇತಿ ನೀಡುವಾಗ ಅವರ ಅಭಿನಯದ 'ಆವೋ ದೊರೆಯೇ, ತಾವುದಾರೋ, ತಮ್ಮ ನಾಮಾಂಕಿತವನ್ನು ಪೇಳಬೇಕು' ಎಂದು ಪಾತ್ರ ಪರಿಚಯಿಸುವ ಸಾರಥಿ ರೀತಿ, 'ಎಲಲೈ ಸಾರಥಿ, ನಾವು ದಾರೇಂದರೆ, ಅಥಳ- ಪಾತಾಳ- ತಳತಳ ಪಾಂಡವ ದೇಶದ ಯುವರಾಜ ಎಂದು ಹೇಳುವ ನಾಯಕನ ಮಾತುಗಳು ಎಲ್ಲರ ಪ್ರಶಂಸೆಗೆ ಪಾತ್ರವಾದವು.
ರೈತರು, ಕೃಷಿ ಕೂಲಿಕಾರ್ಮಿಕರು, ಇನ್ನಿತರರು ವ್ಯವಸಾಯ ಮಾಡಿ ಬಿಡುವಿನ ಸಮಯದಲ್ಲಿ ಇಂಥ ದೊಡ್ಡಾಟ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಕಲೆ, ಸಂಸ್ಕೃತಿ ಉಳಿವಿಗಾಗಿ ಮಾಡುತ್ತಿರುವ ಕಾರ್ಯ ಅವಿಸ್ಮರಣಿಯ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಸರ್ಕಾರ ಕಲೆ, ಕಲಾವಿದರನ್ನು ಗೌರವಿಸುವುದು ಅವಶ್ಯ.



ರಂಗತರಬೇತಿ ವಿಶೇಷತೆ
ದೊಡ್ಡಾಟದ ರಂಗತರಬೇತಿಯಲ್ಲಿ ಹಿರಿಯ ಕಲಾವಿದರು ಯುವ ಕಲಾವಿದರಿಗೆ ತರಬೇತಿ, ಶಿಸ್ತು, ತಾಳ, ಲಯ, ಗಂಭೀರತೆ ಜೊತೆಗೆ ಕಡಿಮೆ ಸಮಯದಲ್ಲಿ ಪ್ರದರ್ಶನ ನೀಡುವುದು, ಆಗಿನ ಕಾಲದ ವೇಷ-ಭೂಷಣಗಳನ್ನ್ನು ಮುಂದುವರಿಕೆ, ಆಧುನಿಕ ಬದಲಾವಣೆಗೆ ಹೊಂದಿಕೊಂಡು ಹೋಗುವುದು ಮುಂತಾದವುಗಳ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಈ ತರಬೇತಿಯಲ್ಲಿ ಗದಗ ಜಿಲ್ಲೆಯ ಎಲ್ಲ ತಾಲೂಕಿನ 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement