ಸಾಮಾಜಿಕ ಕಳಕಳಿ ಇರಲಿ: ಅಣ್ಣಿಗೇರಿ
ಗದಗ: ಸಾಮಾಜಿಕ ಸಂಘಟನೆಗಳು ಜನೋಪಯೋಗಿ ಕಾರ್ಯ ಹಮ್ಮಿಕೊಳ್ಳಬೇಕು, ಉಚಿತ ಆರೋಗ್ಯ ಶಿಬಿರ ಏರ್ಪಡಿಸಿ ಜನಹಿತ ಕಾರ್ಯ ಮಾಡಬೇಕೆಂದು ನಿವೃತ್ತ ಹಿರಿಯ ಶಿಕ್ಷಕ ಬಿ.ಜಿ. ಅಣ್ಣಿಗೇರಿ ಹೇಳಿದರು.
ಅವರು ಭಾವಸಾರ ವ್ಹಿಜನ್ ಇಂಡಿಯಾ ಗದಗ, ಕಲ್ಪವೃಕ್ಷ ಸೇವಾ ಟ್ರಸ್ಟ ಬೆಟಗೇರಿ-ಗದಗ, ಜಿಲ್ಲಾ ನಿವೃತ್ತರ ಸಂಘ ಮತ್ತು ಪಿ.ಎಂ. ನಾಡಗೌಡ ದಂತ ವೈದ್ಯಕೀಯ ಮಹಾವಿದ್ಯಾಲಯ ಬಾಗಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ನಿವೃತ್ತರ ಸಂಘದಲ್ಲಿ ಈಚೆಗೆ ನಡೆದ ದಂತ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದ ಉದ್ಘಾಟನಾ ಶಿಬಿರದಲ್ಲಿ ಮಾತನಾಡಿದರು. ಭಾವಸಾರ ವ್ಹಿಜನ್ ಇಂಡಿಯಾ ಘಟಕದ ಅಧ್ಯಕ್ಷ ಡಾ. ದತ್ತಾತ್ರೇಯ ವೈಕುಂಠೆ, ಕಲ್ಪವೃಕ್ಷ ಸೇವಾ ಟ್ರಸ್ಟ್‌ನ ಅಧ್ಯಕ್ಷ ಜಗದೀಶ ಅರಮನಿ, ಕೆ.ಎಚ್. ಬೇಲೂರ, ಸುರೇಖಾ ಪಿಳ್ಳಿ ಹಾಗೂ ತಜ್ಞ ವೈದ್ಯರು ಪಾಲ್ಗೊಂಡಿದ್ದರು. ಬಾಗಲಕೋಟೆಯ ಪಿ.ಎಂ. ನಾಡಗೌಡ ದಂತ ವೈದ್ಯಕೀಯ ಮಹಾವಿದ್ಯಾಲಯದ ತಜ್ಞ ವೈದ್ಯರ ತಂಡ ಶಿಬಿರವನ್ನು ಯಶಸ್ವಿಯಾಗಿ ನೆರವೇರಿಸಿತು. ಶಿಬಿರದಲ್ಲಿ 100 ಕ್ಕೂ ಹೆಚ್ಚಿನ ಜನ ಪ್ರಯೋಜನ ಪಡೆದುಕೊಂಡರು.