ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶುದ್ಧ ಕಾಯಕನಿಷ್ಠೆ ಇರಲಿ: ರಾಹುತ್

Lingaraj Badiger
Updated On : 30 Jul 2014, 10:39 am

ನರೇಗಲ್ಲ: ಮುಸ್ಲಿಂ ಬಾಂಧವರು ಸ್ಥಳೀಯ ಈದ್ಗಾ ಮೈದಾನದಲ್ಲಿ ಮಂಗಳವಾರ ರಂಜಾನ್ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಜನಾಬ ರೆಹಮಾನಸಾಬ ರಾಹುತ್ ಮಾತನಾಡಿ, ಅಲ್ಲಾಹನ ವಾಣಿಯಂತೆ ನೀವು ಮಾಡುವ ಕಾಯಕದಲ್ಲಿ ಶುದ್ಧ ಕಾಯಕನಿಷ್ಠೆ ಬೆಳೆಸಿಕೊಂಡಾಗ ಮಾತ್ರ ನಿಮ್ಮ ಕಲ್ಯಾಣ ಸಾಧ್ಯ ಎಂಬ ನೀತಿ ಬೊಧನೆಯನ್ನು ತಿಳಿಸಿದರು. ನಿವೃತ್ತ ಮುಖ್ಯಶಿಕ್ಷಕ ಎಚ್.ಡಿ. ಅಣ್ಣಿಗೇರಿ ರಂಜಾನ್ ಹಬ್ಬದ ಮಹತ್ವ ಹಾಗೂ ಮುಸ್ಲಿಂ ಧರ್ಮದವರು ಅನುಸರಿಸಬೇಕಾದ ತತ್ವಗಳು ಹಾಗೂ ಮೌಲ್ಯಗಳನ್ನು ಕುರಿತು ಮಾತನಾಡಿದರು. ಮುಲ್ಲಾಸಾಬ ನಮಾಜ, ಸೈಯದ್ ಹಾಫೀಜ್‌ರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ದರಗಾ ಖಲೀಫ್ ರಹಿಮಾನ ಶ್ಯಾವಲಿ ಶರಣರು, ಉತ್ತರಾಧಿಕಾರಿ ಮಂಜುರಹುಸೇನ್ ಶ್ಯಾವಲಿ ಶರಣರು, ಜನಾಬ ರಹಿಮಾನಸಾಬ ರಾಹುತ, ನಿವೃತ್ತ ಮುಖ್ಯಶಿಕ್ಷಕ ಎಚ್.ಡಿ. ಅಣ್ಣಿಗೇರಿ, ಎಂ.ಎಚ್. ಸಿದ್ಧಿ, ಅಬ್ದುಲ್ ರಹಿಮಾನಸಾಬ ಹದ್ಲಿ, ಎ.ಎ. ನವಲಗುಂದ, ಲಾಡಸಾಬ ಹದ್ಲಿ, ನಜೀರಸಾಬ ದಳವಾಯಿ, ದಾವುಲಸಾಬ ಕುದರಿ, ಬುಡ್ನೆಸಾಬ ರಾಹುತ, ಶಮಶುದ್ಧಿನ್ ಕುದರಿ, ರೈಹಿಮಾನಸಾಬ ಹೊಸಮನಿ, ಡಾ. ಎ.ಆರ್. ರೋಣದ, ಪಟ್ಟಣ ಪಂಚಾಯಿತಿ ಸದಸ್ಯ ರಜಾಕ್ ಹೊಸಮನಿ, ಬಾದಷಾ ಹುಯಿಲಗೋಳ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷರು, ಪದಾಧಿಕಾರಿಗಳು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement