ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮುಂಡರಗಿ: ನಾಗರಪಂಚಮಿ ಸಂಭ್ರಮದ ಆಚರಣೆ

Mainashree
Updated On : 1 Aug 2014, 10:08 am

ಮುಂಡರಗಿ: ಮುಂಡರಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಾಗರ ಪಂಚಮಿ ಹಬ್ಬವನ್ನು ಗುರುವಾರ ಜನರು ಆಚರಿಸಿದರು.
ಬೆಳಗ್ಗೆಯಿಂದಲೇ ಮಹಿಳೆಯರು, ಮಕ್ಕಳು ಸೇರಿಕೊಂಡು ತಮ್ಮ ತಮ್ಮ ಮನೆಗಳಿಗೆ ಸಮೀಪಿರುವ ದೇವಸ್ಥಾನಗಳಿಗೆ, ನಾಗಪ್ಪನ ಕಟ್ಟೆಗಳಿಗೆ ತೆರಳಿ ನಾಗದೇವತೆಗಳಿಗೆ ಹಾಲು ಹಾಕಿ ಅರಳಿಟ್ಟು ಹಾಗೂ ನಾನಾ ತರಹದ ಉಂಡೆಗಳನ್ನು ದೇವರಿಗೆ ಎಡೆಮಾಡಿ ನೈವ್ಯದ್ಯ ಮಾಡಿದ್ದು ಕಂಡು ಬಂದಿತು. ನಂತರ ಜೋಕಾಲಿ ಆಡಿದ್ದು ಕಂಡು ಬಂದಿತು. ನಾಗರ ಪಂಚಮಿ ಅಂಗವಾಗಿ ಇಲ್ಲಿನ ತೋಂಟದಾರ್ಯ ಯುವಕ ಸಂಘ ಹಾಗೂ ದುರ್ಗಾದೇವಿ ಗೆಳೆಯರ ಬಳಗ ಮಹಿಳೆಯರಿಗಾಗಿ ವಿಶೇಷ ದೇಶಿ ಕ್ರೀಡೆಗಳನ್ನು ಆಯೋಜಿಸಿದ್ದರು. ಪಟ್ಟಣದಲ್ಲಿ ಯುವಕರಿಂದ ನಿಂಬೆ ಹಣ್ಣು ಎಸೆಯುವ ಆಟ, ಕಣ್ಣು ಕಟ್ಟುವ ಆಟಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement