ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಡಾ. ರವೀಂದ್ರನಾಥ ಮೇಲೆ ಆರೋಪ: ಪ್ರತಿಭಟನೆ

Mainashree
Updated On : 2 Jun 2014, 11:29 am

ಗದಗ: ಬೆಂಗಳೂರಿನಲ್ಲಿ ದಲಿತ ಐಪಿಎಸ್ ಅಧಿಕಾರಿ ಡಾ. ರವೀಂದ್ರನಾಥ ಅವರಿಗೆ ಪೊಲೀಸ್ ಇಲಾಖೆಯಲ್ಲಿನ ಕೆಲ ಅಧಿಕಾರಿಗಳು ಅಸ್ಪೃಶ್ಯತೆಯಿಂದ ನೋಡುತ್ತಿರುವುದು ಕಂಡು ಬರುತ್ತಿದೆ. ಇಂತಹ ಅಧಿಕಾರಿಗಳ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಎಲ್. ನಾರಾಯಣಸ್ವಾಮಿ ಆರೋಪಿಸಿದರು.
ನಗರದ ಗಾಂಧಿ ವೃತ್ತದಲ್ಲಿ ಡಾ. ರವೀಂದ್ರನಾಥ ವಿರುದ್ಧ ನಡೆದ ವಿದ್ಯಮಾನಗಳನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಾ. ರವೀಂದ್ರನಾಥ ಒಬ್ಬ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಅತ್ಯಂತ ಪ್ರಾಮಾಣಿಕತೆಯಿಂದ ದಕ್ಷ ಆಡಳಿತವನ್ನು ಮಾಡುತ್ತಿದ್ದರೂ ಅವರಿಗೆ ಅನಗತ್ಯ ತೊಂದರೆ ಕೊಡಲಾಗುತ್ತಿದೆ.
ರಾಘವೇಂದ್ರ ಔರಾದಕರ್ ಮೇಲ್ಜಾತಿಯವರಾಗಿದ್ದು, ಗದಗ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರವ ಸಮಯದಲ್ಲಿ 1997 ರಲ್ಲಿ ಒಬ್ಬ ದಲಿತ ಸರ್ಕಾರಿ ನೌಕರಸ್ಥನಿಗೆ ಸುಳ್ಳು ಆಪಾದನೆ ಮಾಡಿ ದೂರು ದಾಖಲಿಸಿ, ದಲಿತರ ಕೇಸನ್ನು ದಾಖಲಿಸಲು ನಿರಾಕರಿಸಿ ಅಸ್ಪೃಶ್ಯತೆಯನ್ನು ತೋರಿ ಒಂದು ದಲಿತ ಕುಟುಂಬವನ್ನು ಬೀದಿ ಪಾಲು ಮಾಡಿರುವ ಘಟನೆ ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.
ಡಾ. ರವೀಂದ್ರನಾಥ ಅವರ ನಿಷ್ಠೆ, ದಕ್ಷತೆ ನೋಡಿ ಸಹಿಸಲಾಗದೆ ಔರಾದಕರ್ ಅವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಇಲ್ಲಸಲ್ಲದ ಆಪಾದನೆಯನ್ನು ಹೊರಿಸಿ ಇವರ ಘನತೆಗೆ ಮತ್ತು ಬಡ್ತಿಗೆ ಧಕ್ಕೆ ತರುವಂತೆ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಇಮ್ತಿಯಾಜ ಮಾನ್ವಿ, ದೇವಪ್ಪ ಲಿಂಗದಾಳ, ಶರೀಫ ಬಿಳೆಯಲಿ, ಬಸವರಾಜ ಈರಣ್ಣವರ, ಬಿ.ಎನ್. ಸಿಂಗಾಡಿ, ಚಲವಾದಿ ಮಹಾಸಭಾದ ಪದಾಧಿಕಾರಿಗಳು ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement