ದೇಶ ರಕ್ಷಣೆಗೆ ಶಿಕ್ಷಣ ಅಗತ್ಯ
ರೋಣ: ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಜಾತ್ಯತೀತ ಮನೋಭಾವನೆಯನ್ನು ಬೆಳೆಸುವುದರ ಜತೆಗೆ ದೇಶ ಭಕ್ತಿ, ದೇಶ ಪ್ರೇಮ ಮತ್ತು ದೇಶ ರಕ್ಷಣೆಗೆ ಪೂರಕವಾಗುವಂಥ ಶಿಕ್ಷಣ ಅತ್ಯಗತ್ಯವಾಗಿದೆ ಎಂದು ಮಾಜಿ ಸೈನಿಕ ಪ್ರಭುಗೌಡ ಪಾಟೀಲ ಹೇಳಿದರು.
ಪಟ್ಟಣದ ಹಳೇ ಪೋಸ್ಟ್ ಕಚೇರಿ ಹತ್ತಿರದ ಅಲ್ಲಾಂ ಇಕ್ಬಾಲ್ ಪೂರ್ವ ಪ್ರಾಥಮಿಕ ಶಾಲೆ ಮತ್ತು ಕೋಚಿಂಗ್ ಕ್ಲಾಸಸ್ ಆಶ್ರಯದಲ್ಲಿ 2 ತಿಂಗಳ ಕಾಲ ನಡೆದ ಬೇಸಿಗೆ ಉಚಿತ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯೋಪಾಧ್ಯಾಯ ಇರ್ಷಾದ್ ಅಹ್ಮದ ಮುಲ್ಲಾ ಮಾತನಾಡಿ, ಬೇಸಿಗೆ ಶಿಬಿರದ ಉತ್ತಮ ವಿದ್ಯಾರ್ಥಿಯಾಗಿ ಕುಮಾರ ಮೋದಿನ್ ಹೊರಪೇಟಿ ಮತ್ತು ಉತ್ತಮ ವಿದ್ಯಾರ್ಥಿನಿಯಾಗಿ ಮಮತಾ ಚೌಧರಿ ಆಯ್ಕೆಗೊಂಡಿದ್ದು, ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಅಭಿನಂದಿಸಲಾಯಿತು. ಹಲವು ಚಟುವಚಿಕೆ ಸ್ಪರ್ಧೆಯಲ್ಲಿ ವೀತಮ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಖೀಲಾ ಖತೀಬ, ಪರ್ವೀನಾ ಖತೀಬ, ಅಮೀನಾ ರಾಜಾಖಾನ, ಐಶ್ವರ್ಯ ಪತ್ತಾರ, ಚೈತ್ರಾ ಉಪಸ್ಥಿತರಿದ್ದರು. ಮಮತಾ ಚೌಧರಿ ಸ್ವಾಗತಿಸಿ, ನಿರ್ವಹಿಸಿದರು. ಪ್ರಿಯಾಂಕ ಪತ್ತಾರ ವಂದಿಸಿದರು.