ಮುಂದಿನ ನಡೆ ಅಭಿವೃದ್ಧಿ ಕಡೆ: ಪಾಟೀಲ
ನರಗುಂದ: ಕಾಂಗ್ರೆಸ್ ಅಧಿಕಾರ ಮಾಡಿ ದೇಶವನ್ನು ಅಭಿವೃದ್ದಿ ಮಾಡದೇ ದಿವಾಳಿ ಮಾಡಿದ್ದು, ಈಗ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗಿದ್ದು, ಮುಂದಿನ ದಿನಗಳಲ್ಲಿ ದೇಶವು ಅಭಿವೃದ್ಧಿಯ ಪಥದಲ್ಲಿ ದಾಫುಗಾಲು ಹಾಕಲಿದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಅವರು ಸೋಮವಾರ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಪಕ್ಷದ ಚಿಹ್ನೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಇಂದು ದೇಶದಲ್ಲಡೆ ಜನತೆ ನರೇಂದ್ರ ಮೋದಿಯವರು ಪ್ರಧಾನಗಳಾಗಿದ್ದಕ್ಕೆ ವಿಜಯೋತ್ಸವ ಆಚರಣೆ ಮಾಡುತ್ತಿರುವದು ಬಹಳ ಸಂತೋಷ ತಂದಿದೆ. ದೇಶ ಕಾಂಗ್ರೆಸ್ದಿಂದ ಮುಕ್ತವಾಗಿದೆ. ಮುಂದಿನ ದಿನಗಳಲ್ಲಿ ನೂತನ ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಪ್ರಪಂಚದಲ್ಲಿ ಅಭಿವೃದ್ದಿ ಶೀಲ ರಾಷ್ಟ್ರವಾಗುವುದರಲ್ಲಿ ಸಂದೇಹ ಇಲ್ಲ. ದೇಶದ ಜನತೆ ಕೂಡ ಬಿಜೆಪಿ ಪಕ್ಷಕ್ಕೆ ಬಹುಮತ ಕೊಟ್ಟು ಎನ್ಡಿಎ ಕೂಟವನ್ನು ಅಧಿಕಾರಕ್ಕೆ ತಂದಿದ್ದು ಸಂತಸ ಮೂಡಿಸಿದೆ ಎಂದರು. ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ತಾಪಂ ಸದಸ್ಯ ಬಿ.ಎಸ್. ಪಾಟೀಲ, ಪುರಸಭೆ ಉಪಾಧ್ಯಕ್ಷ ಕಿರಣ ಮುಧೋಳ, ಸದಸ್ಯ ಉಮೇಶ ಕುಡನ್ನವರ, ಪ್ರಕಾಶ ಪಟ್ಟಣಶಟ್ಟಿ, ಚಂದ್ರಶೇಖರ ಕೋಟಿ, ಚಂದ್ರು ದಂಡಿನ, ಗುರಪ್ಪ ಆದಪ್ಪನವರ, ಸಂಗನಗೌಡ ಪಾಟೀಲ, ಅಜ್ಜು ಪಾಟೀಲ, ಬಸುರಾಜ ಪಾಟೀಲ, ಮಂಜು ಮೆಣಸಗಿ ಉಪಸ್ಥಿತರಿದ್ದರು.