ಸಾಮೂಹಿಕ ವಿವಾಹದಿಂದ ಸಾಮರಸ್ಯ
ಗದಗ: ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯ ಎಂದು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.
ಭಾನುವಾರ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗದಗ ತಾಲೂಕು ಶಾಖೆ ವತಿಯಿಂದ 2014ನೇ ಸಾಲಿನ ಬುದ್ಧ ಬಸವ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಜಯಂತಿ ಅಂಗವಾಗಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ಚಿಂತನೆಗಳು ಕುರಿತು ವಿಚಾರ ಸಂಕಿರಣ ಹಾಗೂ ಸರಳ ಸಾಮೂಹಿಕ ವಿವಾಹಗಳ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಾಮಾಜಿಕ ಚಟುವಟಿಕೆ 12 ವರ್ಷದಿಂದ ನಿರಂತರ ನಡೆಸಿಕೊಂಡ ಬರುತ್ತಿರುವ ಡಿಎಸ್‌ಎಸ್ ಕಾರ್ಯಕರ್ತರ ಕಾರ್ಯ ಶ್ಲಾಘನೀಯ ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಎಸ್.ಎನ್. ಬಳ್ಳಾರಿ, ಬುದ್ಧ ಬಸವ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಆದರ್ಶಗಳನ್ನು ಸರ್ವರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರೊ. ಡಿ.ಜೆ. ಜೋಗಣ್ಣವರ ಉಪನ್ಯಾಸ ನೀಡಿ, ಪಿ.ಎಸ್. ತಳಗೇರಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯೆ ಕಮಲಾ ಹಾದಿಮನಿ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ನಗರಸಭೆ ಸದಸ್ಯ ಮಂಜುನಾಥ ಪೂಜಾರ, ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಬಸವರಾಜ ಕಡೇಮನಿ, ಆರ್.ಎಸ್. ಗುಜ್ಜಲ, ಎಸ್.ಎಸ್. ಉಣ್ಣಿಮಠ, ನಾಗೇಶ ಬಳ್ಳಾರಿ, ವಿರುಪಾಕ್ಷಪ್ಪ ರಾಮಗಿರಿ, ಸತೀಶ ಹೂಲಿ, ಮಾರ್ತಾಂಡಪ್ಪ ಹಾದಿಮನಿ, ಸಣ್ಣರಾಮಪ್ಪ ಬಳ್ಳಾರಿ, ಹೊಳೆಬಸಪ್ಪ ಅಕ್ಕಿ, ಪರುಶುರಾಮ ಪೂಜಾರ, ಈರಪ್ಪ ಕೋಟ್ನಿಕಲ್ಲ, ಚಂದ್ರು ಮೇಲಿನಮನಿ, ಅಶೋಕ ಪತ್ತಾರ, ಗಣೇಶ ಹುಬ್ಬಳ್ಳಿ, ಅಶೋಕ ಹಾದಿಮನಿ, ರವಿ ಹಾದಿಮನಿ ಮುಂತಾದವರು ಭಾಗವಹಿಸಿದ್ದರು. ತಾಲೂಕು ಸಂಚಾಲಕ ಮಾರುತಿ ಗುಡಿಮನಿ ಸ್ವಾಗತಿಸಿದರು. ವಿ.ಎಸ್. ಬಳ್ಳಾರಿ ನಿರೂಪಿಸಿದರು. ಯುವರಾಜ ಬಳ್ಳಾರಿ ವಂದಿಸಿದರು.