ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಲ್ಲಿ ಜೋಡಣೆಗಾಗಿ ಪ್ರತಿಭಟನೆ

Mainashree
Updated On : 4 Jun 2014, 10:37 am

ಗಜೇಂದ್ರಗಡ: ಸ್ಥಳೀಯ ವಾಜಪೇಯಿ ನಗರ ನಿವಾಸಿಗಳಿಗೆ ಕುಡಿಯುವ ನೀರಿನ ನಲ್ಲಿ ಜೋಡಣೆಗೆ ಆಗ್ರಹಿಸಿ ಡಿವೈಎಫ್‌ಐ ನೇತೃತ್ವದಲ್ಲಿ ಬಡಾವಣೆ ನಿವಾಸಿಗಳು ಪುರಸಭೆ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಶಿವಾಜಿಪೇಟೆ ಬಳಿ ನಿರ್ಮಾಣಗೊಂಡ ವಾಜಪೇಯಿ ನಗರ ನಿವಾಸಿಗಳಿಗೆ ಒಂದು ವರ್ಷದಿಂದ ಸಮರ್ಪಕ ಕುಡಿಯುವ ನೀರಿನ ಪೂರೈಕೆಯಿಲ್ಲದೆ ನಿತ್ಯ ಪರದಾಡುವಂತಾಗಿದೆ. ಬಡಾವಣೆಯಲ್ಲಿ ಮೂಲ ಸೌಕರ್ಯ ಇಲ್ಲದಿರುವುದರಿಂದ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ ಎಂದು ದೂರಿದರು.
ನಗರದ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರಿನ ಪೂರೈಕೆಯಾಗಬೇಕು. ಕೊಳಚೆ ನಿರ್ಮೂಲನೆ ಮಂಡಳಿಯವರು ನಿವಾಸಿಗಳ ಮನೆಗೆ ನಲ್ಲಿ ಜೋಡಣೆ ಮಾಡಿದ್ದಾರೆ. ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಲ್ಲ. ಕೂಡಲೇ ಪುರಸಭೆ ಕುಡಿಯುವ ನೀರಿನ ಜೊತೆಗೆ ರಸ್ತೆ, ಚರಂಡಿ, ಶುಚಿತ್ವಕ್ಕೆ ಮುಂದಾಗಬೇಕು. ಈ ಕುರಿತು ಪುರಸಭೆಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇವೆ, ಪ್ರತಿಭಟನೆ ನಡೆಸಿದರೂ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಸ್ಥಳೀಯ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಆಡಳಿತ ತಮಗೆ ಬೇಕಾದ ವಾರ್ಡ್‌ಗಳಿಗೆ ಎಲ್ಲ ಮೂಲಭೂತ ಸೌಲಭ್ಯ ನೀಡುತ್ತಿದೆ. ಬಡವರು ವಾಸಿಸುವ ವಾಜಪೇಯಿ ಬಡಾವಣೆಗೆ ಮೂಲ ಸೌಲಭ್ಯ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇನ್ನಾದರೂ ವಾಜಪೇಯಿ ನಗರ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸದೆ ಅಸಡ್ಡೆ ತೋರಿದರೆ ಮುಂದಿನ ದಿನಗಳಲ್ಲಿ ಪುರಸಭೆಗೆ ಬೀಗ ಜಡಿದು ಪ್ರತಿಭಟನೆ ಮಾಡುವುದಾಗಿ ಕಳಕಪ್ಪ ರಾಂಪುರ, ಬಿ.ಎಸ್. ಶೀಗೆ, ದ್ಯಾಮನಗೌಡ ಪಾಟೀಲ, ಶಂಕರ ಬಂಡಾರಿ, ಶಾಂತಾ ಗುಡ್ಡದ, ಸಲ್ಮಾ ಹವಾಲ್ದಾರ, ರೂಪಾ ಪವಾರ, ನಾಗರತ್ನಾ ನೆಲ್ಲೂರ, ಕಸ್ತೂರೆಮ್ಮ ಬುಗಡಿ, ಶಾರಮ್ಮ ಪಟ್ಟಣಶೆಟ್ಟರ ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement