ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಿಜೆಪಿಯಿಂದ ಅಭಿವೃದ್ಧಿ

Mainashree
Updated On : 4 Jun 2014, 10:37 am

ನರಗುಂದ: ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಹೇಳಿದರು.
ಮಂಗಳವಾರ ಪಟ್ಟಣದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ, ಯಡಿಯೂರು ಸಿದ್ದಲಿಂಗಶ್ವರ ಕಾಲೇಜುಗಳಲ್ಲಿ ಮತಯಾಚಿಸಿದ ನಂತರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಡಿದರು.
ಪ್ರಸಕ್ತ ಪದವೀದರ ಚುನಾವಣೆಯಲ್ಲಿ ನನಗೆ ಮತ ಹಾಕುವ ಮೂಲಕ ನನ್ನ ಆಯ್ಕೆಗೊಳಿಸಲು ಎಲ್ಲ ಪದವೀಕರರು ನನಗೆ ಮತದಾನ ಮಾಡಬೇಕು.
ಈ ಬಾರಿ ಕೆಲವು ಪಕ್ಷಗಳು, ಪಕ್ಷದ ಕಾರ್ಯಕರ್ತರಲ್ಲದವರಿಗೆ ಟಿಕೆಟ್ ನೀಡಿ ಪ್ರಾಮಾಣಿಕ ಕಾರ್ಯಕರ್ತರಿಗೆ ಮೋಸ ಮಾಡಿದ್ದು, ಆ ಪಕ್ಷ ತಂದೆ ಮಕ್ಕಳಿಗೆ ಮಾತ್ರ ಸೀಮಿತ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದ ವಿಚಾರವಾಗಿದೆ. ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿರುವ ಜೆಡಿಎಸ್ ಸಂಪೂರ್ಣ ತಿರಸ್ಕರಿಸುವಂತೆ ಮನವಿ ಮಾಡಿದರು.
ಮಾಜಿ ಸಚಿವ ಸಿ.ಸಿ. ಪಾಟೀಲ, ಅಶೋಕ ಪತ್ರಿ, ಅಜ್ಜು ಪಾಟೀಲ, ಉಮೇಶ ಯಳ್ಳೂರ, ಬಿ.ಕೆ. ಗುಜಮಾಗಡಿ, ಜಿ.ಬಿ. ಕುಲಕರ್ಣಿ, ಚಂದ್ರ ದಂಡಿನ, ಜೆ.ವಿ. ಹೊಸಕೇರಿ, ಎಸ್.ವಿ. ಜಕ್ಕಲಿ ಮುಂತಾದವರು ಹಾಜರಿದ್ದರು.
ಬಿ.ವೈ. ಹಲಕುರ್ಕಿ ಸ್ವಾಗತಿಸಿ, ನಿರೂಪಿಸಿದರು. ಎಸ್.ಎಸ್. ಪಾಟೀಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement