ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗಿಡ ನೆಟ್ಟು ಪರಿಸರದಲ್ಲಿ ಪ್ಲಾಸ್ಟಿಕ್ ಅಳಿಸಿ

Mainashree
Updated On : 6 Jun 2014, 9:58 am

ಕನ್ನಡಪ್ರಭ ವಾರ್ತೆ, ಗದಗ, ಜೂ. 5
ಇಂದು ತಾಂತ್ರಿಕ ಯುಗದಲ್ಲಿ ಪರಿಸರ ಪ್ರತಿದಿನ ನಾಶವಾಗುವುದನ್ನು ಕಂಡು ಬುದ್ಧಿ ಜೀವಿಗಳು, ಪರಿಸರ ವಾದಿಗಳು ಇಂದು ಪಟ್ಟಣ ಪ್ರದೇಶ ಬಿಟ್ಟು ಹಳ್ಳಿಗಾಡಿನಲ್ಲಿ ವಾಸಿಸುತ್ತಿದ್ದಾರೆ. ಇವಕ್ಕೆಲ್ಲ ಒಂದೇ ಪರಿಹಾರ ಹೆಚ್ಚು ಗಿಡ ನೆಡಿ, ಪರಿಸರ ಸಮತೋಲನ ಕಾಪಾಡಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಎಸ್.ಎಸ್. ಮುರಗೋಡ ಹೇಳಿದರು.
ಜಿಲ್ಲಾಡಳಿತ, ಜಿಪಂ, ಲೋಕೋಪಯೋಗಿ ಇಲಾಖೆ, ಜಿಲ್ಲಾ ವಕೀಲರ ಸಂಘ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅರಣ್ಯ ಇಲಾಖೆ ಆಶ್ರಯದಲ್ಲಿ ಹುಬ್ಬಳ್ಳಿ ರಸ್ತೆಯಲ್ಲಿರುವ ನೂತನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದು ಬೆಂಗಳೂರಿನಲ್ಲಿಯೇ ದಿನಾಲು ಸುಮಾರು 5 ಲಕ್ಷ ವಾಹನಗಳು ಓಡಾಡುತ್ತಿದ್ದು, ಅವುಗಳು ಬಿಡುವ ಹೊಗೆಯಿಂದ ಜನರು ರೋಗ, ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಜತೆಗೆ ಪರಿಸರ ನಾಶವಾಗುತ್ತಿದೆ. ಮಕ್ಕಳು ಹಸಿವೆಯಿಂದ ಬಳಲುತ್ತಿದ್ದಾರೆ. ಇದೇ ರೀತಿ ಪರಿಸರ ಹಾಳಾಗುತ್ತಾ ಹೋದಲ್ಲಿ ಪ್ರಪಂಚ ವಿನಾಶ ಖಚಿತವಾಗಿದ್ದು, ಈ ಕುರಿತು ಪ್ರತಿಯೊಬ್ಬರೂ ಜಾಗೃತಿ ಹೊಂದುವುದು ಅವಶ್ಯ ಎಂದರು.
ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಗಿಡ ನೆಟ್ಟರು. ಪ್ರಾದೇಶಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಡಿ.ಎನ್. ಅಘೋರೆ ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ವಿ.ಬಿ. ಹುಬ್ಬಳ್ಳಿ ಅಪರ ಜಿಲ್ಲಾ ನ್ಯಾಯಾಧೀಶ ಕುಲಕರ್ಣಿ ಅಂಬಾದಾಸ ಜಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹೊಸಮನಿ ಪುಂಡಲೀಕ, ನ್ಯಾಯಾಧೀಶೆ ಶೋಭಾ, ಜೆಎಂಎಫ್‌ಸಿ 1 ಮತ್ತು 2ನೇ ನ್ಯಾಯಾಲಯ ನ್ಯಾಯಾಧೀಶ ದಯಾನಂದಮೂರ್ತಿ, ಕೆ. ಲತಾ, ಎಸ್ಪಿ ಕೆ.ಟಿ. ಬಾಲಕೃಷ್ಣ, ಜಿಪಂ ಉಪ ಕಾರ್ಯದರ್ಶಿ ಷಡಕ್ಷರಪ್ಪ, ಜಾನ್ ಬಕ್ತುಲಾ, ಎಸ್.ವೈ. ಬೀಳಗಿ, ಎಸ್.ಆರ್. ಶಿಂದೆ, ಆರ್.ಎಫ್. ಕರೀಂಖಾನ್, ಆರ್.ಎ. ರಬ್ಬನಗೌಡ್ರ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement