ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೈತ ಪರ ಹೋರಾಟದಲ್ಲಿ ಬಿಜೆಪಿ ಮುಂದೆ

Mainashree
Updated On : 6 Jun 2014, 9:57 am

ಕನ್ನಡಪ್ರಭ ವಾರ್ತೆ, ಗದಗ, ಜೂ. 5
ರೈತಪರ ಹೋರಾಟದಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ ಎಂದು ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಅಶೋಕ ನವಲಗುಂದ ಹೇಳಿದರು.
ಅವರು ಗುರುವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ರೈತ ಪರ ಹೋರಾಟವನ್ನು ಬಿಜೆಪಿ ರೈತ ಮೋರ್ಚಾ ಹಲವಾರು ಬಾರಿ ಕೈಗೊಂಡು ರೈತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಿದೆ. ಸಹಕಾರ ರಂಗದಲ್ಲಿ ಸಾಲಮನ್ನಾ, ಕಡಲೆ ಬೆಳೆಗೆ ಬೆಂಬಲ ಬೆಲೆ, ಮುಂಗಾರು ಹಂಗಾಮಿನಲ್ಲಿ ಸಬ್ಸಿಡಿ ದರದಲ್ಲಿ ಬೀಜ, ಗೊಬ್ಬರ, ಕೆಸಿಸಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರಿಗೆ ಹೆಚ್ಚು ಸಾಲ ಸೌಲಭ್ಯ ಕೊಡಿಸುವಲ್ಲಿ ಸಾಕಷ್ಟು ಪ್ರಯತ್ನಿಸಿದೆ.
ಬಿಜೆಪಿ ಗದಗ ಜಿಲ್ಲಾ ಉಸ್ತುವಾರಿ ಎಂ.ಎಸ್. ಕರಿಗೌಡ್ರ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದಿದ್ದು, ಅಭಿವೃದ್ಧಿ ಪರ ಯೋಜನೆಗಳು, ಯೋಚನೆಗಳು ಜಾರಿಯಲ್ಲಿ ಬರುವ ಸಾಧ್ಯತೆ ಇವೆ. ಜನಸಾಮಾನ್ಯರಿಗೆ, ರೈತರಿಗೆ ಬರುವ ದಿನಗಳು ಉತ್ತಮವಾಗಲಿವೆ. ರೈತ ಮೋರ್ಚಾ ಸಂಘಟನೆ ಮುಖಾಂತರ ಕೃಷಿ ಇಲಾಖೆಯ ಸವಲತ್ತುಗಳ ಮಾಹಿತಿ ಪಡೆದು ರೈತರಿಗೆ ದೊರಕಿಸಲು ಪ್ರಯತ್ನಿಸಬೇಕು. ಬೆಳೆವಿಮೆ ತಾರತಮ್ಯ ನಿವಾರಣೆಗೆ ಮೋರ್ಚಾ ಪದಾಧಿಕಾರಿಗಳು ಪ್ರಯತ್ನಿಸಿ. ರೈತ ಮೋರ್ಚಾ ಸಂಘಟನೆ ಕಾರ್ಯಕರ್ತರು ಹಲವು ಹಂತಗಳಲ್ಲಿ ಸಂಪರ್ಕ ಸಾಧಿಸಿ ಪಕ್ಷದ ಸಂಘಟಿಸುವುದು ಅವಶ್ಯವಾಗಿದೆ. ಕಾರ್ಯಕರ್ತರಿಗೆ ಜವಾಬ್ದಾರಿ ನೀಡಬೇಕೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ ಮಾತನಾಡಿದರು. ನರಗುಂದ ಮಂಡಳ ಅಧ್ಯಕ್ಷ ಮೇಟಿ, ರಾಚನಗೌಡ್ರ, ಶರಣಪ್ಪ ಬಳ್ಳೊಳ್ಳಿ, ಹಡಪದ, ರಾಮಣ್ಣ ಕಮ್ಮಾರ, ಶಂಭುಲಿಂಗ ಒಡೆಯರ, ನಾಮದೇವ ಚಿಕ್ಕಣ್ಣವರ, ಈರಣ್ಣ ಕುರುಡಗಿ, ಶ್ರೀನಿವಾಸ ಹುಬ್ಬಳ್ಳಿ, ಬಸವರಾಜ ಶೀರಿ, ಬಸವರಾಜ ವಾರಿ, ಬಿ.ಎಸ್. ಕೊಪ್ಪದ, ಪದಾಧಿಕಾರಿಗಳು ಇದ್ದರು.
ಚಂದ್ರಶೇಖರ ಪಟ್ಟಣಶೆಟ್ಟಿ ಸ್ವಾಗತಿಸಿದರು. ನಿಂಗಪ್ಪ ಮಣ್ಣೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement