ಅವಧಿ ಮೀರಿದ ರಸಗೊಬ್ಬರ ಮಾರಾಟ; ಗದಗದಲ್ಲಿ ಪ್ರತಿಭಟನೆ
ಗದಗ: 2012ರಲ್ಲಿ ಉತ್ಪಾದಿಸಿದ ರಸಗೊಬ್ಬರ ಮಾರಾಟದ ಬಗ್ಗೆ
ರೈತರು ಪ್ರತಿಭಟನೆ ನಡೆಸಿದ ಪ್ರಸಂಗ ಇಲ್ಲಿ ಶನಿವಾರ ನಡೆಯಿತು.
ತಾಲೂಕಿನ ವಿವಿಧ ಗ್ರಾಮಗಳ ರಸಗೊಬ್ಬರ ಖರೀದಿಗೆ ಬಂದ ವೇಳೆಯಲ್ಲಿ ಚೀಲಗಳ ಮೇಲೆ ನಮೂದಾಗಿದ್ದ ಹಳೆಯ ದಿನಾಂಕವನ್ನು ಗಮನಿಸಿ, ಪ್ರಸಕ್ತ ಸಾಲಿನ ಗೊಬ್ಬರ ನೀಡುವಂತೆ ವಿನಂತಿಸಿದ್ದಾರೆ. ಆದರೆ ಸಿಬ್ಬಂದಿ ರೈತರೊಂದಿಗೆ ಅನುಚಿತವಾದಗಿ ವರ್ತಿಸಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿಯಾಗಿದೆ.
ಸ್ಥಳಕ್ಕೆ ಆಗಮಿಸಿದ ಮಾರಾಟ ಮಂಡಳಿಯ ನಿರ್ದೇಶಕ ವಸಂತ ಮೇಟಿ ರೈತರ ಮನವೊಲಿಸುವಲ್ಲಿ ಹರಸಾಹಸ ಪಡಬೇಕಾಯಿತು. ಅನಂತರ ಹೊಸ ಸ್ಟಾಕ್ ಬಂದಿರುವುದನ್ನೇ ನೀಡಲು ಪ್ರಾರಂಭಿಸಿದ ಅನಂತರ ಗೊಂದಲ ಇತ್ಯರ್ಥವಾಯಿತು.