ಪಶ್ಚಿಮ ಪದವೀಧರ ಕ್ಷೇತ್ರ ಕಣದಲ್ಲಿ 16 ಅಭ್ಯರ್ಥಿಗಳು
ಗದಗ: ರಾಜ್ಯ ವಿಧಾನ ಪರಿಷತ್ತಿಗೆ ಪಶ್ಚಿಮ ಪದವೀಧರ ಕ್ಷೇತ್ರದಿಂದ ನಡೆಯಲಿರುವ ಚುನಾವಣೆಗಾಗಿ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದ ಇಂದು ಒಟ್ಟು ಇಬ್ಬರು ಅಭ್ಯರ್ಥಿಗಳು ನಾಮಪತ್ರಗಳನ್ನು ವಾಪಸ್ಸು ಪಡೆದಿದ್ದು, ಅಂತಿಮವಾಗಿ 16 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಡಾ. ಲಿಂಗರಾಜ ರುದ್ರಪ್ಪ ಅಂಗಡಿ ಮತ್ತು ಮಹ್ಮದಗೌಸ ಇಮಾಮಸಾಬ್ ತೊರಗಲ್ಲ ಅವರು ಶುಕ್ರವಾರ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಅಂತಿಮವಾಗಿ ಚುನಾವಣಾ ಕಣದಲ್ಲಿ 16 ಅಭ್ಯರ್ಥಿಗಳಿದ್ದು, ನೀರಲಕೇರಿ ಪಿ.ಎಚ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ವಸಂತ ಬಸವರಾಜ ಹೊರಟ್ಟಿ (ಜನತಾದಳ ಜಾತ್ಯತೀತ), ಎಸ್.ವಿ. ಸಂಕನೂರ (ಬಿಜೆಪಿ) ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಅಮೃತಪ್ಪ ಗುರಿಕಾರ, ಕಲ್ಮನಿ ಹ ನುಮಂತಗೌಡ ರುದ್ರಗೌಡ, ಗೋವಿಂದ ಕೃಷ್ಣಾಜಿ ಕುಲಕರ್ಣಿ, ಚಂದ್ರಪ್ಪ ಬಸಪ್ಪ ಹೊಂಡದಕಟ್ಟಿ, ದಶರಥ ಚಂದ್ರಹಾಸ ರಂಗರೆಡ್ಡ, ಎ.ಕೆ. ನಾಶಿ, ಬಸಪ್ಪ ಶಿವಮಲ್ಲಪ್ಪ ಮೋಕಾಶಿ, ಮಹೇಶ ಶಿವರಾಮ ಶೆಟ್ಟಿ, ರವಿಕುಮಾರ ಬಸವರಾಜ ಅಸೂಟಿ, ರಾಜು ಹರಿಶ್ಚಂದ್ರ ಕಾಂಬಳೆ, ಲಂಬೂನವರ ಶೌಕತಅಲಿ ಹಜರೇಸಾಬ್, ಶ್ಯಾಮ ಮಲ್ಲನಗೌಡರ ದೇವನಗೌಡರ ಹಾಗೂ ಸಿ.ಎಂ. ಶಿವಕುಮಾರ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾ ಅಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ವಿ.ಬಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.