ನಾಳೆ ಈಶ್ವರಪ್ಪ ಹುಟ್ಟುಹಬ್ಬ: ಕುಸ್ತಿ ಪಂದ್ಯಾವಳಿ
ಗದಗ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ 67ನೇ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ಮತ್ತು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರಾಜ್ಯ ಕಮಿಟಿ ಆಶ್ರಯದಲ್ಲಿ ರಾಷ್ಟ್ರಮಟ್ಟದ ಪುರುಷ ಮತ್ತು ಮಹಿಳೆಯರ ಆಹ್ವಾನಿತ ಕುಸ್ತಿ ಪಂದ್ಯಾವಳಿ ಹಾಗೂ ರಾಜ್ಯಮಟ್ಟದ ಸುಗಮ ಸಂಗೀತ ಕಾರ್ಯಕ್ರಮವನ್ನು ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10.30ಕ್ಕೆ ಜರಗುವ ರಾಜ್ಯಮಟ್ಟದ ಸುಗಮ ಸಂಗೀತ ಕಾರ್ಯಕ್ರಮ ಮತ್ತು ಅಂಧ ಮಕ್ಕಳಿಗೆ ಬಟ್ಟೆ, ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಕಲ್ಲಯ್ಯಜ್ಜನವರು ವಹಿಸುವರು. ಮಾಜಿ ಸಚಿವ ಸಿ.ಸಿ. ಪಾಟೀಲ ಉದ್ಘಾಟಿಸುವರು. ನ್ಯಾಮಗೌಡ ಚಿಕ್ಕಣ್ಣವರ ಅಧ್ಯಕ್ಷತೆ ವಹಿಸುವರು. ಪ್ರಾ. ಎಸ್.ವಿ. ಸಂಕನೂರ ಪಾರಿತೋಷಕ ವಿತರಿಸುವರು. ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜ ಹಿಡ್ಕಿಮಠ ಅವರನ್ನು ಸನ್ಮಾನಿಸಲಾಗುವುದು.
ಉಪನ್ಯಾಸಕರಾಗಿ ಸಿದ್ದಣ್ಣ ಜಕಬಾಳ, ಡಾ. ಎಸ್.ಬಿ. ಗೋವಿಂದಪ್ಪನವರ, ಅತಿಥಿಗಳಾಗಿ ವಿಠ್ಠಲ ಹಳ್ಳೂರ, ಉದ್ದಾನಪ್ಪ ಕಡ್ರಾಯನಪುರ, ಬಸವರಾಜ ಕರಡಿಕೊಪ್ಪ, ಬೀರಪ್ಪ ಬಂಡಿ, ತೋಟಪ್ಪ ಕುರಡಗಿ ಇತರರಿರುವರು.
ಮಧ್ಯಾಹ್ನ 3ಕ್ಕೆ ಜರಗುವ ರಾಷ್ಟ್ರಮಟ್ಟದ ಪುರುಷ ಹಾಗೂ ಮಹಿಳೆಯರ ಆಹ್ವಾನಿತ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮ ಜರುಗಲಿದ್ದು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿದ್ಯ ವಹಿಸುವರು.
ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಕಳಕಪ್ಪ ಬಂಡಿ ಉದ್ಘಾಟಿಸುವರು. ಮಾಜಿ ಸಚಿವ ಸಿ.ಸಿ. ಪಾಟೀಲ ಪಾರಿತೋಷಕ ವಿತರಿಸುವರು. ಅತಿಥಿಗಳಾಗಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಎಂ.ಎಸ್. ಕರಿಗೌಡ್ರ, ಎಸ್.ಬಿ. ಸಂಕಣ್ಣನವರ, ಶ್ರೀಕಾಂತ ಖಟವಟೆ, ಎಂ.ಎಂ. ಹಿರೇಮಠ, ಚಂದ್ರು ದಂಡಿನ ಉಪಸ್ಥಿತರಿರುವರು ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಅರುಣ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.