ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಸವಕಲ್ಯಾಣದ ಹರಿಜನ ಕೇರಿಯಲ್ಲಿ ನಡೆಯುವ ಉಪವಾಸ ಆಚರಣೆಗೆ ತೋಂಟದ ಸಿದ್ಧಲಿಂಗ ಶ್ರೀಗಳಿಂದ ಇಂದು ಚಾಲನೆ

Mainashree
Updated On : 9 Jun 2014, 11:14 am

ಕನ್ನಡಪ್ರಭ ವಾರ್ತೆ, ಗದಗ, ಜೂ. 8
ದೇಶದಲ್ಲಿ ಈಗಲೂ ಜೀವಂತವಾಗಿರುವ ಕರಾಳ ಅಸ್ಪೃಷ್ಯತೆ ನಿವಾರಣೆಗಾಗಿ ಬಸವ ತತ್ವದಲ್ಲಿ ನಂಬಿಕೆ ಇಟ್ಟ ನಾಡಿನ 250 ಪ್ರಗತಿಪರ ಮಠಾಧೀಶರು ಅಸ್ಪೃಷ್ಯತಾ ವಿರೋಧಿ ಸಂದೇಶವನ್ನು ನಾಡಿಗೆ ಸಾರುವ ಸಲುವಾಗಿ ಜೂ. 9ರಂದು ಬಸವ ಕಲ್ಯಾಣದ ಹರಿಜನಕೇರಿಯಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತವರೆಗೆ ಉಪವಾಸ ಆಚರಣೆ ನಡೆಸಲಿದ್ದಾರೆ. ಈ ಸಮಾರಂಭವನ್ನು ಡಂಬಳ-ಗದಗ ತೋಂಟದಾರ್ಯ ಮಠದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಉದ್ಘಾಟಿಸುವರು. ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಶ್ರೀಗಳು ಅಧ್ಯಕ್ಷತೆ ವಹಿಸುವರು.
ಮಾನವತೆ ಕಡೆಗೆ ಮಠಾಧೀಶರ ನಡಿಗೆ ಹೆಸರಿನ ಈ ಕಾರ್ಯಕ್ರಮ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದ ಹರಿಜನ ಕೇರಿಯಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ನಾಡಿನ ಪ್ರಮುಖ ಮಠಾಧೀಶರಾದ ಆನಂದಪುರ, ನೀಡಸೋಸಿ, ಸಾಣಿಹಳ್ಳಿ, ಒಕ್ಕಲಿಗರಪೀಠ ಕೆಂಗೇರಿ, ಬೀದರ, ಹುಲಸೂರ, ನಾಗನೂರ, ಭಾಲ್ಕಿ, ಧಾರವಾಡ ಮುರುಘಾಮಠ, ವಾಲ್ಮೀಕಿ ಪೀಠ ರಾಜನಹಳ್ಳಿ, ಕನಕಪೀಠ ತಿಂಥಣಿ, ಲಿಂಗಾಯತ ಪಂಚಮಸಾಲಿ ಪೀಠ ಹರಿಹರ, ಪಂಚಮ ಸಾಲಿಪೀಠ ಕೂಡಲಸಂಗಮ, ಹಾರಕೂಡ, ಯರನಾಳ, ಶಿರೂರ, ಕಿತ್ತೂರ, ಮೋಟಗಿಮಠ ಅಥಣಿ, ವಿರಕ್ತಮಠ ಪಾಂಡೊಮಟ್ಟಿ, ಆದಿಜಾಂಬವಪೀಠ ಕೋಡಿಹಳ್ಳಿ, ಉರಿಲಿಂಗ ಪೆದ್ದೀಶ್ವರ ಸಂಸ್ಥಾನಮಠ. ವಿಶ್ವಕರ್ಮ ಎಕದಂಡಗಿಮಠ ಶಹಾಪುರ, ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠ ನರಸೀಪುರ, ಭಗೀರಥ ಪೀಠ ಹೊಸದುರ್ಗ, ಕುಂಚಿಟಿಗ ಮಹಾಸಂಸ್ಥಾನ ಹೊಸದುರ್ಗ, ಭೋವಿ ಗುರುಪೀಠ ಬಾಗಲಕೋಟೆ, ಯಾದವ ಗುರುಪೀಠ ಚಿತ್ರದುರ್ಗ, ಬೈಲೂರು, ಪದ್ಮಸಾಲಿ ಗುರುಪೀಠ ಗುತ್ತೂರು, ಸಂತ ಸೇವಾಲಾಲ ಸಂಸ್ಥಾನಮಠ ಗಬ್ಬೂರವಾಡಿ-ಲಿಂಗಸ್ಗೂರು, ಚಲವಾದಿ ಗುರುಪೀಠ ಸಿಬಾರ, ಆರ್ಯ ಈಡಿಗ ಸಂಸ್ಥಾನಮಠ ಸೋಲೂರು, ಹಡಪದ ಅಪ್ಪಣ್ಣ ಸಂಸ್ಥಾನಮಠ ತಂಗಡಗಿ, ಮಡಿವಾಳ ಗುರುಪೀಠ ಚಿತ್ರದುರ್ಗ, ಕುಂಬಾರ ಗುರುಪೀಠ ಕೆ.ಬಳ್ಳೇಕಟ್ಟೆ, ಶಿವಶರಣ ಹರಳಯ್ಯ ಗುರುಪೀಠ ಲಿಂಗಿಕಟ್ಟೆ, ಲಂಬಾಣಿ ಗುರುಪೀಠ ಚಿತ್ರದುರ್ಗ, ಹೆಳವ ಸಮಾಜದ ಗುರುಪೀಠ ಚಿತ್ರದುರ್ಗ, ವಿಶ್ವಕರ್ಮ ಸಂಸ್ಥಾನಮಠ ನಿಟ್ಟರಹಳ್ಳಿ, ಕಾಳಭೈರವೇಶ್ವರ ಸಿಲಾಂಜನಮಠ ಬಾಳಕೋಡಿ, ಕುಂಬಾರಪೀಠ ಶಕ್ತಿನಗರ ಮಂಗಳೂರು, ಕುರುಹಿನಶೆಟ್ಟಿಪೀಠ ಗದಗ-ಬೆಟಗೇರಿ, ಗುಳೇದಗುಡ್ಡ, ಅಕ್ಕ ಅನ್ನಪೂರ್ಣೇಶ್ವರಿ ಬೀದರ, ದುತ್ತರಗಾವ, ಬಸವಾಶ್ರಮ ಬೀದರ, ರಾಮಾರೂಢಾಶ್ರಮ ಮಮ್ಮಟಗೇರಿ, ವಿರಕ್ತಮಠ ಯಡ್ರಾಮಿ, ಸುಕ್ಷೇತ್ರ ಇಂಚಿಗೇರಿ, ವಿರಕ್ತಮಠ ಯರನಾಳ, ಉಕ್ಕಲಿ, ವಿರಕ್ತಮಠ ಬಸವನಬಾಗೇವಾಡಿ, ರೇವಣ ಸಿದ್ದೇಶ್ವರ ಮಹಾಮಠ ಮನ್ಸೂರ, ವಿರಕ್ತಮಠ ಅಕ್ಕಲಕೋಟ, ಘನಮಠೇಶ್ವರಮಠ ಸಂತೆಕಲ್ಲೂರ, ಸಿದ್ಧಯ್ಯನಕೋಟೆ, ಅನುಭವ ಮಂಟಪ ಲಿಂಗಸ್ಗೂರು, ಭಾವ್ಯೆಕ್ಯ ಕೇಂದ್ರ ರಮ್ಮನಹಳ್ಳಿ ಇತರ ಮಠಾಧೀಶರು, ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಗೋಪಾಲಗೌಡರು ಪಾಲ್ಗೊಳ್ಳಲಿದ್ದಾರೆ. ಉಪವಾಸ ವ್ರತ ಸಂಜೆ ಅಂತ್ಯವಾದ ಬಳಿಕ ರಾತ್ರಿ ಬಸವ ಕಲ್ಯಾಣದ ಧರ್ಮ ಪ್ರಕಾಶ ಓಣಿ ದಲಿತ ಕೇರಿಯಲ್ಲಿ ಎಲ್ಲ ಮಠಾಧೀಶರು ದಲಿತ ಸಮೂಹದ ಜನರೊಂದಿಗೆ ಸಹಪಂಕ್ತಿ ಭೋಜನ ಸ್ವೀಕರಿಸುವರು.
ಜೂ. 10ರ ಬೆಳಗ್ಗೆ 10ಕ್ಕೆ ಭೀಮನಗರದಲ್ಲಿ ದಲಿತರೊಂದಿಗೆ ಮಠಾಧೀಶರು ಉಪಹಾರ ಸ್ವೀಕರಿಸಲಿದ್ದಾರೆ. ಅಸ್ಪೃಶ್ಯತೆ, ಅಜ್ಞಾನ, ಅಂಧಾನುಕರಣೆ, ಮೂಢನಂಬಿಕೆ ವಿರುದ್ಧ ಹೋರಾಡಿದ ಅಪ್ರತಿಮ ಬಸವಾದಿ ಶರಣರ ಸದಾಶಯಗಳನ್ನು ಬಿಂಬಿಸುವ ಕಾರ್ಯಕ್ರಮದಲ್ಲಿ ಬಸವಾಭಿಮಾನಿಗಳು ಪಾಲ್ಗೊಳ್ಳಬೇಕೆಂದು ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement