ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೀರು ಸಮಸ್ಯೆ: ಪ್ರತಿಭಟನೆ

Vishwanath S
Updated On : 11 Jun 2014, 11:18 am

ನರೇಗಲ್ಲ: ನರೇಗಲ್ಲ ಪಪಂ ವ್ಯಾಪ್ತಿಯಲ್ಲಿ ಬಹುದಿನಗಳಿಂದ ಉದ್ಭವಿಸಿದ್ದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಹಿಂದೆ ಪಪಂಗೆ ಮನವಿ ಮಾಡಿದರೂ ಅಧಿಕಾರಿಗಳು ಗಮನಹರಿಸದಿರುವುದನ್ನು ಖಂಡಿಸಿ ಸ್ಥಳೀಯ 10ನೇ ವಾರ್ಡ್‌ನ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಪಪಂ ಮಾಜಿ ಅಧ್ಯಕ್ಷ ದಾವೂದಲಿ ಕುದರಿ ಮಾತನಾಡಿ, ನೀರು ಪೂರೈಕೆ ಕುರಿತು ಈ ಹಿಂದೆ ಎರಡು ಬಾರಿ ಮನವಿ ಮಾಡಿದರೂ ಕಾಲಾವಕಾಶ ಪಡೆದ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸದಿದ್ದಾಗ ಅನಿವಾರ್ಯವಾಗಿ ಧರಣಿ ನಡೆಸುವಂತಾಗಿದೆ. ಜನತೆ ಬಹುದಿನಗಳಿಂದ ನೀರಿಗಾಗಿ ತತ್ತರಿಸುತ್ತಿದ್ದರೂ ಶೀಘ್ರ ಕ್ರಮ ಕೈಗೊಳ್ಳದ ಪಪಂ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ. ಮೋಟಾರ ಸುಟ್ಟಿವೆ. ಕೆಲವೇ ಬೋರ್ ಚಾಲ್ತಿಯಲ್ಲಿವೆ ಎಂದು ನೆಪ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸ್.ಎಫ್. ನವಲಗುಂದ, ಪಪಂ ಸದಸ್ಯ ಶಶಿಧರ ಸಂಕನಗೌಡ್ರ, ಯಲ್ಲಪ್ಪ ಮಣ್ಣೋಡ್ಡರ, ರಜಾಕ್ ಹೊಸಮನಿ, ಮಾಜಿ ಸದಸ್ಯ ಸಂಜೀವಕುಮಾರ ಕುಲಕರ್ಣಿ ನೂರಾರು ಜನರು ಭಾಗವಹಿಸಿದ್ದರು.
ಕಾಮಗಾರಿಯಲ್ಲಿ ಗೋಲ್‌ಮಾಲ್: ಹಡಪದ
ಗಜೇಂದ್ರಗಡ: ಸ್ಥಳೀಯ ಪುರಸಭೆ ಆಡಳಿತ, ಪೌರಾಡಳಿತ ನಿಯಮಗಳನ್ನು ಗಾಳಿಗೆ ತೂರಿ ಬಹುತೇಕ ಕಾಮಗಾರಿಗಳನ್ನು ಹೊರಗುತ್ತಿಗೆ ನೀಡುವ ಮೂಲಕ ಸ್ಥಳೀಯ ಸಂಸ್ಥೆಗಳ ಅಧಿಕಾರ ಮೊಟಕುಗೊಳಿಸುವ ಹುನ್ನಾರ ನಡೆಸಿದೆ ಎಂದು ಸಿಪಿಐಎಂ ಪುರಸಭೆ ಸದಸ್ಯ ಎಂ.ಎಸ್. ಹಡಪದ ಆಪಾದಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜೂ. 4ರಂದು ನಡೆದ 3ನೇ ಸಾಮಾನ್ಯ ಸಭೆಯಲ್ಲಿ ಪಟ್ಟಣ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಕಾಮಗಾರಿ ಬಗ್ಗೆ ಚರ್ಚಿಸದೆ ಒಳಗಿಂದೊಳಗೆ ಪುರಸಭೆ ಆಡಳಿತ ಹೊರ ಗುತ್ತಿಗೆ ಕಾಮಗಾರಿ ನೀಡುವ ಮೂಲಕ ವ್ಯಾಪಕ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದೆ ಎಂದು ದೂರಿದ್ದಾರೆ. 2013-14ನೇ ಸಾಲಿಗೆ ಉದ್ಯಾನ ನಿರ್ವಹಣೆಗೆ ಪ್ರತಿ ತಿಂಗಳು ರು. 82 ಸಾವಿರ, ಸಾರ್ವಜನಿಕ ಬೀದಿದೀಪ ನಿರ್ವಹಣೆಗೆ ಪ್ರತಿ ತಿಂಗಳು ರು. 72,947, ಆರೋಗ್ಯ ವಿಭಾಗದ ಕ್ರಿಮಿನಾಶಕ ಮತ್ತು ಇತರೆ ಸಾಮಗ್ರಿ ಪೂರೈಕೆಗೆ ರು. 96 ಸಾವಿರ, ಪಟ್ಟಣದ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಪ್ರತಿ ತಿಂಗಳು ರು. 83,074 ಮತ್ತು ಪಟ್ಟಣದ ಕಸ ನಿರ್ವಹಣೆಗೆ ಪ್ರತಿ ತಿಂಗಳು ರು. 77 ಸಾವಿರ ಪುರಸಭೆಯಿಂದ ಭರಿಸಲಾಗುತ್ತಿದ್ದು, ಕೋಟ್ಯಂತರ ಅನುದಾನ ಖರ್ಚು ಮಾಡಿದರೂ ಹೇಳಿಕೊಳ್ಳುವಂತ ಸುಧಾರಣೆ ಪಟ್ಟಣದಲ್ಲಿ ಕಂಡಿಲ್ಲ ಎಂದು ದೂರಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸಾರ್ವಜನಿಕರ ಹಣ ಭ್ರಷ್ಟಾಚಾರಕ್ಕೆ ಒಳಗಾಗದಂತೆ ತಡೆಯಲು ಈ ಹೊರಗುತ್ತಿಗೆ ವ್ಯವಹಾರ ಕೈಬಿಡದಿದ್ದರೆ ಜನತೆಯ ಸಹಕಾರದೊಂದಿಗೆ ಸಿಪಿಐಎಂ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತದೆ ಎಂದು ತಿಳಿಸಿದ್ದಾರೆ.
ವಾಹನ ಚಾಲಕರ ತರಬೇತಿಗೆ ಅರ್ಜಿ ಆಹ್ವಾನ
ಗದಗ: 2014ನೇ ಸಾಲಿನ ಎಸ್‌ಸಿಪಿಎಸ್‌ಟಿಪಿ ಯೋಜನೆಯಡಿ ಪರಿಶಿಷ್ಟ ಜಾತಿಯವರಿಗೆ 17 ಅಭ್ಯರ್ಥಿಗಳು ಪರಿಶಿಷ್ಟ ಪಂಗಡ 6 ಲಘು ಮೋಟಾರು ವಾಹನ ಚಾಲಕರು, ಅಟೋ ರಿಕ್ಷಾ, ಭಾರಿ ವಾಹನ ಸಾರಿಗೆ ತರಬೇತಿ ನೀಡುವ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂ. 30 ಕೊನೆ ದಿನಾಂಕವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಗದಗದಲ್ಲಿ ಜೂ. 15ರೊಳಗೆ ಅರ್ಜಿ ಫಾರ್ಮ್‌ಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗದಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement