ಯೋಜನೆ ನಿರುದ್ಯೋಗಿಗಳಿಗೆ ಬಳಕೆಯಾಗಲಿ: ವಸಂತ ಹೊರಟ್ಟಿ
ಗದಗ: ಸರ್ಕಾರ ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ಸಮೀಕ್ಷೆಗಳಲ್ಲಿ ನಿರುದ್ಯೋಗಿ ಯುವಕರನ್ನು ಬಳಕೆ ಮಾಡಿಕೊಳ್ಳುವ ಪ್ರಕ್ರಿಯೆ ಆಗಬೇಕಿದೆ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಸಂತ ಹೊರಟ್ಟಿ ಹೇಳಿದರು.
ಮಂಗಳವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪದವೀಧರ ಮತದಾರರು ಅದರಲ್ಲೂ ಯುವಕರೆಲ್ಲರೂ ಸೇರಿ ಅವರೇ ಸ್ಪರ್ಧಿಸಿದವರಂತೆ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ನಿರುದ್ಯೋಗಿ ಪದವೀಧರರಿಗಾಗಿ ಒಂದು ಪತ್ಯೇಕ ಬಿಲ್ ಪಾಸ್ ಮಾಡಬೇಕು. ನಿರುದ್ಯೋಗಿ ಪದವೀಧರರಿಗಾಗಿ ಉದ್ಯೋಗ ಮೇಳಗಳನ್ನು ಆಯೋಚಿಸಬೇಕು ಎನ್ನುವ ಹತ್ತಾರು ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತೇನೆ ಎಂದರು.
ಗದಗ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಕಾರ್ಯದರ್ಶಿ ಡಾ. ಬಸವರಾಜ ಧಾರವಾಡ ಪ್ರಾಸ್ತಾವಿಕ ಮಾತನಾಡಿದರು.
ನವಲಗುಂದ ಶಾಸಕ ಎನ್.ಎಚ್. ಕೊನರೆಡ್ಡಿ ಮಾತನಾಡಿದರು. ದೀರೇಂದ್ರ ಹುಯಿಲಗೋಳ, ಶಿವಶಂಕರ ಕಲ್ಲೂರ, ಪ್ರಾ. ವೆಂಕಟೇಶ ಕಟ್ಟಿಮನಿ, ನಗರಸಭೆ ಮಾಜಿ ಸದಸ್ಯೆ ಲಕ್ಷ್ಮೀದೇವಿ ಕಟ್ಟಿಮನಿ, ಎಸ್.ಎಮ್. ಕೊಟಗಿ, ಎಂ.ಎನ್. ಚಿನ್ನೂರ, ಎಸ್.ಟಿ. ಬ್ಯಾಕೋಡ, ಎಂ.ಕೆ. ಲಮಾಣಿ ಇತರರಿದ್ದರು.