ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಕಾಲಕ್ಕೆ ವೇತನ, ಸೌಲಭ್ಯ ಕಲ್ಪಿಸಿ

Vishwanath S
Updated On : 11 Jun 2014, 11:18 am

ಮುಂಡರಗಿ: ರಾಜ್ಯ ಸರ್ಕಾರದ ಆದೇಶದಂತೆ ಗ್ರಾಮ ಪಂಚಾಯಿತಿ ನೌಕರರಿಗೆ ಸೌಲಭ್ಯ ಹಾಗೂ ವೇತನ ಸಕಾಲಕ್ಕೆ ಕೊಡುತ್ತಿಲ್ಲ, ತಾಲೂಕಿನ 15 ಗ್ರಾಪಂಗಳಲ್ಲಿ ಹಲವಾರು ತಿಂಗಳಿಂದ ವೇತನ ನೀಡದೇ ಬಾಕಿ ಉಳಿಸಿಕೊಳ್ಳಲಾಗಿದೆ. ಕೂಡಲೇ ವೇತನ ನೀಡುವಂತೆ ಆಗ್ರಹಿಸಿ ಸೋಮವಾರ ತಾಪಂ ಎದುರು ಪ್ರತಿಭಟಿಸಿ ತಾಪಂ ಇಒಗೆ ಮನವಿ ಸಲ್ಲಿಸಿದರು.
ನೌಕರರ ಸಂಘದ ಅಧ್ಯಕ್ಷ ಮೈಲಾರಪ್ಪ ಕಲಕೇರಿ ಮಾತನಾಡಿ, ಪಂಚಾಯಿತಿ ಪಿಡಿಒ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕೆಲವು ಪಂಚಾಯಿತಿಯಲ್ಲಿ ನಾಲ್ಕು ತಿಂಗಳಿಂದ ನಾಲ್ವತ್ತು ತಿಂಗಳು ಬಾಕಿ ಉಳಿಸಿಕೊಂಡಿವೆ. ಹೀಗಾದರೆ ನೌಕರರ ಜೀವನ ನಡೆಯುವುದು ಹೇಗೆ ಎಂದು ಹೇಳಿದ ಅವರು, ಶ್ರಮಪಟ್ಟು ದುಡಿದು ಹಬ್ಬ ಹರಿದಿನಗಳಲ್ಲಿ ನೌಕರರು ಕಾಡಿ ಬೇಡಿ ವೇತನ ಪಡೆಯುವಂತಾಗಿದೆ. ಎರಡು ದಿನಗಳಲ್ಲಿ ಸ್ಪಂದಿಸದಿದ್ದರೆ ಶೀಘ್ರನೌಕರರ ಕುಟುಂಬ ಸಮೇತ ತಾಪಂ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಾಕಿ ಇರುವ ಕಲಕೇರಿ ಪಂಚಾಯಿತಿ ಸಿಬ್ಬಂದಿ 14 ತಿಂಗಳು, ಕೊರ್ಲಹಳ್ಳಿ 6, ಡಂಬಳ 5, ಹೆಸರೂರು 4, ಡೋಣಿ 6, ಹಳ್ಳಿಕೇರಿ 5, ಬಾಗೇವಾಡಿ 10, ಹಮ್ಮಿಗಿ 5, ಬಿದರಹಳ್ಳಿ 5, ಕದಾಂಪುರ 40, ಹಿರೇವಡ್ಡಟ್ಟಿ 6, ಹಾರೋಗೇರಿ 6, ಪೇಠಾಲೂರು 6, ಮೇವುಂಡಿ ವೇತನ ಬಾಕಿ ಉಳಿದಿದೆ. ಕೂಡಲೇ ವೇತನ ನೀಡಬೇಕೆಂದು ಆಗ್ರಹಿಸಿದರು.
ತಾಪಂ ಇಒ ಪರ ಸಹಾಯಕ ನಿರ್ದೇಶಕ ಎಸ್.ಎಂ. ಸಂಶಿ ಮನವಿ ಸ್ವೀಕರಿಸಿದರು. ತಾಪಂ ಇಒ ಡಿ. ಮೋಹನ ಈ ಬಗ್ಗೆ ಕೂಡಲೇ ಕ್ರಮ ಜರುಗಿಸುವ ಭರವಸೆ ನೀಡಿದರು. ನಂತರ ನೌಕರರು ಪ್ರತಿಭಟನೆ ವಾಪಸು ಪಡೆದರು. ಭೀಮಪ್ಪ ಚಲವಾದಿ, ಕೆ.ಎಸ್. ಹಿರೇಮಠ, ರಮೇಶ ಮುರಾರಿ, ಮಲ್ಲೇಶ ಬಳಿಗಾರ, ದಾವಲಸಾಬ ಕರಡಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement