ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನವಿರು ಭಾವಗಳ ಅಭಿವ್ಯಕ್ತಿಯೇ ಗಜಲ್

Vishwanath S
Updated On : 12 Jun 2014, 11:17 am

ಕನ್ನಡಪ್ರಭ ವಾರ್ತೆ, ಗದಗ, ಜೂ. 11
ಪ್ರೇಮಿಗಳ ನಡುವಿನ ಸೂಕ್ಷ್ಮ ನವಿರು ಭಾವನೆಗಳ ಅಭಿವ್ಯಕ್ತಿಯೇ ಗಜಲ್. ಇಲ್ಲಿ ಪ್ರೇಮಿಗಳ ಭಾವನೆಗಳ ಮಹಾಪೂರವಿರುತ್ತದೆ. ಮೂಲತಃ ಅರೆಬಿಕ್ ಭಾಷೆಯಲ್ಲಿ ಜನ್ಮತಾಳಿದ ಗಜಲ್ ಫರ್ಸಿಯನ್ನಿಂದ ಉರ್ದು ಭಾಷೆಗೆ ಬಂದು ಗಟ್ಟಿ ತಳವೂರಿಕೊಂಡಿತೆಂದು ಕನಕಗಿರಿಯ ಗಜಲ್ ಸಾಹಿತಿ ಅಲ್ಲಾ ಗಿರಿರಾಜ ಹೇಳಿದರು.
ನಗರದ ಒಕ್ಕಲಗೇರಿ ಶ್ರೀರಾಚೂಟೇಶ್ವರ ದೇವಸ್ಥಾನ ಆವರಣದಲ್ಲಿ ಜರುಗಿದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದ 75ನೇ ಸಂಭ್ರಮ ಹಾಗೂ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಗಜಲ್ ಪದ್ಯಗಳಿಗೆ ಅರಸರ ಆಸ್ಥಾನದ ಹೊಗಳು ಭಟ್ಟರ ಪ್ರಶಂಸೆಯ ಖಾಸಿದಾ ಎಂಬ 6ನೇ ಶತಮಾನದ ಅರಬ್ಬಿ ಪದ್ಯಗಳು ಮೂಲವೆಂಬ ಅಭಿಪ್ರಾಯವಿದೆ. ಷೇರ್ ಎಂಬ ದ್ವಿಪದಿಯಲ್ಲಿದ್ದು, ಒಂದು ದ್ವಿಪದಿ ಇನ್ನೊಂದು ದ್ವಿಪದಿಯ ಸಾಲುಗಳೊಂದಿಗೆ ಸಂಬಂಧವಿಟ್ಟುಕೊಳ್ಳಬೇಕಾಗಿಲ್ಲ. ಗಜಲ್ನಲ್ಲಿ 5ರಿಂದ 21ರಷ್ಟು ದ್ವಿಪದಿಗಳಿರುತ್ತವೆಂದರು. ನಗರಸಭೆ ಸದಸ್ಯ ಸಂತೋಷ ಮೇಲಗಿರಿ ಅವರು ಭೀಮಪ್ಪ ಮುಗಳಿಯವರ ಕದ ತಟ್ಟಿದ ಕನಸು ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ಡಾ. ಮಹಾಂತೇಶ ಮಲ್ಲನಗೌಡರ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎ. ಮೊರಬದ, ಕಿಶೋರಬಾಬು ನಾಗರಕಟ್ಟಿ, ಮಲ್ಲೇಶ ಡಿ.ಎಚ್, ಕೆ.ಎಚ್. ಬೇಲೂರ, ಕವಿತಾ ದಂಡಿನ, ಎಫ್.ಪಿ. ಲಕ್ಷ್ಮೇಶ್ವರಮಠ, ಆರ್.ಜಿ. ಚಿಕ್ಕಮಠ, ರಾಜು ಸೊಪಡ್ಲ, ಬಿ.ಎಸ್. ಹಿಂಡಿ, ವಾಸು ಟಿಕಾನದಾರ, ಕ.ವಿ. ಕುಂದಗೋಳ, ಅ.ದ. ಕಟ್ಟಿಮನಿ ಇದ್ದರು.
ಮೂಲತಃ ಅರೆಬಿಕ್ ಭಾಷೆಯಲ್ಲಿ ಜನ್ಮತಾಳಿದ ಗಜಲ್ ಫರ್ಸಿಯನ್ನಿಂದ ಉರ್ದು ಭಾಷೆಗೆ ಬಂದು ಗಟ್ಟಿ ತಳವೂರಿಕೊಂಡಿತು.
-ಅಲ್ಲಾ ಗಿರಿರಾಜ,
ಕನಕಗಿರಿಯ ಗಜಲ್ ಸಾಹಿತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement