ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಫುಟ್‌ಪಾತ್ ವ್ಯಾಪಾರ ಸ್ಥಗಿತಕ್ಕೆ ಆಗ್ರಹಿಸಿ ಮನವಿ

Vishwanath S
Updated On : 13 Jun 2014, 11:27 am

ಗಜೇಂದ್ರಗಡ: ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಬಳಿಯ ಪುಟ್‌ಪಾತ್ ವ್ಯಾಪಾರವನ್ನು ಸ್ಥಗಿತಗೊಳಿಸಿ  ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ರಜಾಕ ಡಾಲಾಯತ್ ಮಾತನಾಡಿ, ಕಾಲಕಾಲೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಿರುವುದು ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗಿದೆ. ಆದರೆ ಟ್ರಾಫಿಕ್ ಸಿಗ್ನಲ್ ಬಳಿಯ ಪುಟ್‌ಪಾತ್ ವ್ಯಾಪಾರದಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಜತೆಗೆ ಪುಟಪಾತ್ ವ್ಯಾಪಾರಿಗಳಿಗೂ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆ ಆಡಳಿತ ಪುಟಪಾತ್ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ರಾಜು ಕ್ವಾಟಿ, ಹುಸೇನ ಕವಲೂರ, ಗುರು ರಾಠೋಡ, ಶಫೀ ಡಾಲಾಯತ್, ಯುಸೂಫ್ ಹಿರೇಹಾಳ, ಮಂಜುನಾಥ ಅಜಮೀರ, ಕುಮಾರ ರಾಠೋಡ, ರಾಘು ಮಾದರ, ರಹಮಾನ ಕವಲೂರ, ರಾಜು ಬಾಗವಾನ, ಹುಸೇನ ಡಾಲಾಯತ್ ಉಪಸ್ಥಿತರಿದ್ದರು.
ಪಕ್ಷೇತರ ಅಭ್ಯರ್ಥಿ  ಕಲ್ಮನಿ ಮತ ಯಾಚನೆ
ಗದಗ:  ಪಶ್ಚಿಮ ಪದವೀಧರ ಪಕ್ಷೇತರ ಅಭ್ಯರ್ಥಿ ಹನಮಂತಗೌಡ ಕಲ್ಮನಿ ಗುರುವಾರ ಬಳಗಾನೂರಿನ ಚನ್ನವೀರೇಶ್ವರ ಪ್ರೌಢ ಶಾಲೆಯಲ್ಲಿ ಹಾಗೂ ಗ್ರಾಮದ ಪದವೀಧರರಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಪದವೀಧರ ವೀರಣ್ಣ ಅಂಗಡಿ ಪದವೀಧರರ ಚುನಾವಣೆಯಲ್ಲಿ ನಮ್ಮ ಗ್ರಾಮದವರಾದ, ಯುವಕರ ಸಮಸ್ಯೆಯನ್ನು ಅರಿತಿರುವ ಯುವಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಸಂತೋಷದ ಸಂಗತಿ. ಹಾಗಾಗಿ ಗ್ರಾಮದ ಪದವೀಧರರೆಲ್ಲರೂ ಒಟ್ಟಾಗಿ ಪಕ್ಷೇತರ ಅಭ್ಯರ್ಥಿ ಹನಮಂತಗೌಡ ಕಲ್ಮನಿಯವರನ್ನು ಬೆಂಬಲಿಸಿಸುತ್ತಿದ್ದು, ಈ ಬಾರಿ ಅವರ ಗೆಲುವು ಖಚಿತ ಎಂದರು. ರವಿ ಕುರಿ, ವಿನೋದ ಹುಚ್ಚಣ್ಣವರ, ವೈ.ಬಿ. ಗಡ್ಡೇಪ್ಪನವರ, ವೀರಣ್ಣ ಅಂಗಡಿ, ವಿ.ಬಿ. ಕರುಮುಡಿ, ಎಂ.ಆರ್. ಪಡೆಸೂರ, ಕುಮಾರ ಕಲಕೇರಿ, ಮಹೇಶ ಪಾಟೀಲ, ಮಲ್ಲು ಗೊಲ್ಲರ ಮುಂತಾದವರು ಉಪಸ್ಥಿತರಿದ್ದರು.
ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಬೇಡಿ: ಸುಜಾತಾ ಸುವರ್ಣಾ
ಮುಂಡರಗಿ: ಮಕ್ಕಳನ್ನು ಒತ್ತಾಯ ಪೂರ್ವಕವಾಗಿ ಮನೆಗೆಲಸ, ಅಂಗಡಿ ಕೆಲಸ, ಒಕ್ಕಲುತನ ಸೇರಿದಂತೆ ವಿವಿಧ ಕೆಲಸಕ್ಕೆ ಹಚ್ಚುವ ಮೂಲಕ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಬೇಡಿ ಎಂದು ಮುಂಡರಗಿ ನ್ಯಾಯಾಲಯದ ನ್ಯಾಯಾಧೀಶೆ ಸುಜಾತಾ ಸುವರ್ಣಾ ಹೇಳಿದರು. ಅವರು ಗುರುವಾರ ಪಟ್ಟಣದ ಪುರಸಭೆ ಆವರಣದಲ್ಲಿರುವ ಗಾಂಧೀ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ತಾಲೂಕು ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ ಇವುಗಳ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ, ಸರ್ಕಾರಿ ವಕೀಲರಾದ ಸುಜಾತಾ ಶಿಗ್ಲಿ, ತಹಸೀಲ್ದಾರ್ ಡಿ.ಐ. ಹೆಗ್ಗೊಂಡ, ಎಸ್.ಎ. ಹಿರಿಯಾಲ್, ನಾಗರಾಜ ಅರಳಿ, ನಾಗಭೂಷಣ ಹಿರೇಮಠ ಮಾತನಾಡಿದರು. ನ್ಯಾಯವಾದಿ ಎ.ಕೆ. ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಿ. ಮೋಹನ್, ಲಲಿತಾ ಹೊಸಳ್ಳಿ, ಎನ್.ಜೆ. ಪಟ್ಟದಕಲ್ಲ ಇದ್ದರು. ಗುರುರಾಜ ಈಳಿಗೇರ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳಿಗೆ ಶಿಕ್ಷಣ ಹಕ್ಕು ಕಲ್ಪಿಸಿ: ನಾರಾಯಣ ಆರಿ
ರೋಣ: ಮಕ್ಕಳ ಜೀವನವನ್ನು ಉಜ್ವಲಗೊಳಿಸಲು ಶಿಕ್ಷಣ ಹಕ್ಕು ಕಲ್ಪಿಸುವುದು ಅತ್ಯಗತ್ಯವಾಗಿದೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕ ನಾರಾಯಣ ಆರಿ ಹೇಳಿದರು. ಅವರು ಗುರವಾರ ಪಟ್ಟಣದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ಸಹಾಯಕ ಸರ್ಕಾರಿ ಅಭಿಯೋಜಕರ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಮತ್ತು ತಾಲೂಕು ಕಾರ್ಮಿಕ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಜರುಗಿದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕಾರ್ಮಿಕ ನಿರೀಕ್ಷಕ ಸಿದ್ದನಗೌಡ ಪಾಟೀಲ, ಮುಖ್ಯೋಪಾಧ್ಯಾಯ ಬಿ.ಕೆ. ಜಾಲಿಹಾಳ ಮುಂತಾದವರು ಮಾತನಾಡಿದರು. ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಅಧಿನಿಯಮ 1986 ಕುರಿತು ನ್ಯಾಯವಾದಿ ವಿ.ಡಿ. ಪವಾಸ್ಕರ, ಮಕ್ಕಳ ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳು ಕುರಿತು ನ್ಯಾಯವಾದಿ ಜಿ.ಆರ್. ಯಳವತ್ತಿ ಉಪನ್ಯಾಸ ನೀಡಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಂ. ಡಂಬಳ, ಕಾರ್ಯದರ್ಶಿ ಎಸ್.ಆರ್. ಮುಗಳಿ, ಎಚ್.ಎಫ್. ಕಾಡದೇವರಮಠ, ಎಸ್.ವೈ. ಚಲವಾದಿ, ಬಿ.ಆರ್. ಮೆಣಸಗಿ, ಝಡ್.ಎಂ. ನದಾಫ್, ಆರ್.ಎಫ್. ಗೌಡರ, ವೈ.ಎಂ. ಹುಡೇದ, ವಿಜಯಲಕ್ಷ್ಮೀ ಕಾಡರಗಿಮಠ, ಸುಮಂಗಲಾ ಅಮರನಾಥ, ಮಹಾಲಕ್ಷ್ಮೀ ಬುರಡಿ, ಎಸ್.ಎಸ್.ನಡುವಿನಮನಿ, ರೇಣುಕಾ ಕುಂಟೋಜಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.  ಶಿಕ್ಷಕ ಮಹೇಶ ಕುರಿಯವರ ನಿರೂಪಿಸಿದರು. ಎಸ್.ಎಸ್. ಬೀರನೂರ ಸ್ವಾಗತಿಸಿದರು. ತೇಜಶ್ವಿನಿ ಕುಷ್ಟಗಿ ವಂದಿಸಿದರು.
ಪರಿಸರ ಸಂರಕ್ಷಣೆ ಅವಶ್ಯ
ಲಕ್ಷ್ಮೇಶ್ವರ: ಮನುಷ್ಯ ಆರೋಗ್ಯಯುತ ಬದುಕು ಸಾಗಿಸಲು ಗಿಡ-ಮರಗಳ ರಕ್ಷಣೆ ಪ್ರತಿ ನಾಗರಿಕನ ಕರ್ತವ್ಯವಾಗಿದೆ ಎಂದು ಪ್ರಾಚಾರ್ಯ ಡಾ. ಎಸ್.ವಿ. ಗೊರಬಾಳ ಹೇಳಿದರು. ಅವರು ಗುರುವಾರ ಪಟ್ಟಣದ ಕಮಲಾ ಮತ್ತು ವೆಂಕಪ್ಪ ಅಗಡಿ ತಾಂತ್ರಿಕ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಾಲಾ-ಕಾಲೇಜು, ಮನೆ ಸುತ್ತಲಿನ ಪರಿಸರದಲ್ಲಿ ಹೆಚ್ಚು ಗಿಡಗಳನ್ನು ನೆಡಬೇಕು ಎಂದರು. ಡಾ. ಎನ್. ಹಯವದನ, ಎನ್‌ಎಸ್‌ಎಸ್ ಘಟಕದ ಸೋಮಶೇಖರ ಕೆರಿಮನಿ, ಅರ್.ಡಿ. ಗ್ರಾಮಪುರೋಹಿತ, ರವಿ ಕೊಡದಾಳ, ವಿಕ್ರಮ ಶಿರೋಳ, ಎಸ್.ವಿ. ಮಹಾಪುರುಷ, ಜ್ಯೋತಿ ರವಿಕುಮಾರ, ಎಸ್.ಎಫ್. ಕೊಡ್ಲಿ, ಗಿರೀಶ ಯತ್ತಿನಹಳ್ಳಿ, ಎಸ್.ಎನ್. ಗೊಂದಕರ, ಮಾಲತೇಶ ಸೂರಣಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement