ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಅಂಟಿದ ಶಾಪ: ವಿಜಯಕುಮಾರ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜೂ. 13
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬಾಲ ಕಾರ್ಮಿಕ ಪದ್ಧತಿ ಅನಿಷ್ಟವಾಗಿ ಕಾಡುತ್ತಿದೆ ಎಂದು ಪಟ್ಟಣದ ದಿವಾಣಿ ನ್ಯಾಯಾಧೀಶ ವಿಜಯಕುಮಾರ ಕನ್ನೂರ ಹೇಳಿದರು.
ಅವರು ಶಿರಹಟ್ಟಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಲಕ್ಷ್ಮೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕಾರ್ಮಿಕ ಇಲಾಖೆ, ಆರಕ್ಷಕ ನಿರೀಕ್ಷಕರ ಕಚೇರಿ ಹಾಗೂ ಸರ್ಕಾರಿ ಪ್ರೌಢಶಾಲೆ ಲಕ್ಷ್ಮೇಶ್ವರ ಇವುಗಳ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮೂಹ ಸಂಪನ್ಮೂಲ ಕೇಂದ್ರದ ಸಂಯೋಜಕಿ ಜಯಶ್ರೀ ಗುಡಿ, ನ್ಯಾಯವಾದಿ ಮಹೇಶ ಹಾರೋಗೇರಿ ಉಪನ್ಯಾಸ ನೀಡಿದರು. ನ್ಯಾಯವಾದಿ ಬಸವರಾಜ ಬಾಳೇಶ್ವರಮಠ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣದ ವಿಶೇಷ ತಹಸೀಲ್ದಾರ್ ತುಳಸಿ ಪಾಲನ್ಕರ, ಸಹಾಯಕ ಸರ್ಕಾರಿ ಅಭಿಯೋಜಕಿ ಜಿ.ಎಸ್. ಪಾಟೀಲ, ಮುಖ್ಯೋಪಾಧ್ಯಾಪಕ ಜಿ.ಎ. ಕಾಳೆ, ನ್ಯಾಯವಾದಿ ವಿ.ಎಸ್. ಪಶುಪತಿಹಾಳ, ಎನ್.ಸಿ. ಪಾಟೀಲ, ಎನ್.ಆರ್. ಸಾತಪುತೆ, ಬಸವರಾಜ ಕನವಳ್ಳಿ ಮುಂತಾದವರು ಹಾಜರಿದ್ದರು.
ಶಿಕ್ಷಕಿ ವಿ.ಬಿ. ಪಾಟೀಲ ಸ್ವಾಗತಿಸಿದರು. ಎಂ.ಐ. ಮಾದರ ಹಾಗೂ ಆರ್.ಎಸ್. ಯಲಬುರ್ಗಿ ನಿರೂಪಿಸಿದರು. ಜೆ.ಡಿ. ಕಲ್ಲಣ್ಣವರ ವಂದಿಸಿದರು. ಇದಕ್ಕೂ ಮೊದಲು ಸರ್ಕಾರಿ ಪ್ರೌಢಶಾಲೆಯ ಮಕ್ಕಳು ನಡೆಸಿದ ಜಾಥಾಕ್ಕೆ ನ್ಯಾಯಾಧೀಶ ವಿಜಯಕುಮಾರ ಕನ್ನೂರ ಚಾಲನೆ ನೀಡಿದರು. ಮಕ್ಕಳು ಕೋರ್ಟ್ ಆವರಣದಿಂದ ಬಾಲ ಕಾರ್ಮಿಕ ಪದ್ಧತಿ ವಿರೋಧಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಥಾ ಮಾಡುವ ಮೂಲಕ ಸಮಾಜದಲ್ಲಿ ಇರುವ ಅನಿಷ್ಟ ಪದ್ಧತಿ ನಿರ್ಮೂಲನೆ ಮಾಡುವಂತೆ ಘೋಷಣೆ ಕೂಗಿದರು.