ಮಹಿಳಾ ಅಪಹರಣಕ್ಕೆ ಕಡಿವಾಣ ಹಾಕಿ
ಗದಗ: ಕಾಣೆಯಾದ ಮಹಿಳೆಯರನ್ನು ಪತ್ತೆ ಮಾಡಿ ಮಹಿಳಾ ಅಪಹರಣ ತಡೆಗಟ್ಟಿ ಅಪಹರಣಕಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ಗದಗ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಯುವತಿಯರು ಮತ್ತು ಮಹಿಳೆಯರು ಕಾಣೆಯಾಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಈ ಬಗ್ಗೆ ದೂರು ದಾಖಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದಿರುವುದು ಆತಂಕಕಾರಿ ಬೆಳವಣಿಗೆ. ಃಛಡ್ಝ್ಟಿಟಿಛಟ ಈ್ಠ್ಝಟಜ ಖಜ್ಛ್ಟ್ಠಜಡ ಇ್ಡ್ಠಜಛ್ಡ (ಃಈಖಇ) ಪ್ರಕಾರ ಕರ್ನಾಟಕದಲ್ಲಿ ಅತಿ ಹೆಚ್ಚು ಮಹಿಳೆಯರು ಕಾಣೆಯಾಗಿದ್ದರ ಬಗ್ಗೆ ವರದಿಯಾಗಿದೆ. ಇದರಿಂದ ಹೆಣ್ಣುಮಕ್ಕಳ ಮಾರಾಟ ಜಾಲವಿರುವುದು ಖಚಿತವಾಗಿದೆ.
ರಾಜ್ಯದಲ್ಲಿ ಪ್ರತಿನಿತ್ಯ 15-22 ಯುವತಿಯರು ಕಾಣೆಯಾಗುತ್ತಿರುವ ಬಗ್ಗೆ ಈಚೆಗೆ ವರದಿಯಾಗಿದೆ. ಮಹಿಳೆಯರು ಕಾಣೆಯಾಗಿರುವ ಬಗ್ಗೆ ಸ್ವತಃ ಗೃಹ ಸಚಿವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಮಹಿಳೆಯರ ಅಪಹರಣದಲ್ಲಿ ರಾಜ್ಯ ಮೊದಲ ಸ್ಥಾನ ಪಡೆದಿರುವುದು ರಾಜ್ಯದ ಜನತೆ ತಲೆ ತಗ್ಗಿಸುವಂತ ವಿಚಾರ ಎಂದು ದೂರಿದರು. ತಡೆಗಟ್ಟದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಗದಗ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಶ್ರೀ ಉಗಲಾಟದ, ಜಿಪಂ ಅಧ್ಯಕ್ಷೆ ಶಾಂತಾ ದಂಡಿನ, ಜಿಪಂ ಉಪಾಧ್ಯಕ್ಷ ಸುನೀತಾ ಹಳ್ಳೆಪ್ಪನವರ, ವಂದನಾ ವರ್ಣೇಕರ, ಕಮಲಾಕ್ಷಿ ಗೊಂದಿ, ಸುಶೀಲಾ ಶೀರಿ, ಪಾರ್ವತಿ ಮರಿಗೌಡರ, ನಗರಸಭೆ ಸದಸ್ಯೆ ಜಯಶ್ರೀ ಭೈರವಾಡೆ, ಅಶ್ವಿನಿ ಜಗತಾಪ, ಪ್ರೇಮಾ ಕಡೆಮನಿ, ಉಮಾ ಬೇಗನೂರ, ಜಯಶ್ರೀ ಅಣ್ಣಿಗೇರಿ, ಕಮಲಾಕ್ಷಿ ಸೋಮರೆಡ್ಡಿ, ಪೂಜಾ ಬೇವೂರ, ರೇಣುಕಾ ಬೆಳವಟಗಿ ಇನ್ನಿತರರಿದ್ದರು.