ಕುಬೇರಪ್ಪ ಸ್ಥಿತಿ ನೋಡಿ ಅಯ್ಯೋ ಎನ್ನಿಸುತ್ತಿದೆ: ಡಾ. ಧಾರವಾಡ
ಗದಗ: ತಮ್ಮ ರಾಜಕೀಯ ಭವಿಷ್ಯಕ್ಕೆ ಕಲ್ಲು ಹಾಕಿದ ಅಭ್ಯರ್ಥಿಯ ಪರವಾಗಿ ಹೇಳಿಕೆಗಳನ್ನು ನೀಡುತ್ತಿರುವ ಕುಬೇರಪ್ಪನವರ ಸ್ಥಿತಿ ನೋಡಿ ಅಯ್ಯೋ ಎನಿಸುತ್ತಿದೆ ಎಂದು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಬಸವರಾಜ ಧಾರವಾಡ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹೊರಟ್ಟಿಯವರ ಅಪ್ಪ-ಮಕ್ಕಳ ಬಗ್ಗೆ ಮಾತನಾಡುವ ಕುಬೇರಪ್ಪನವರಿಗೆ ಹಾವೇರಿಯಲ್ಲಿ ಉದಾಸಿ ಅಪ್ಪ-ಮಕ್ಕಳು, ಶಿವಮೊಗ್ಗದಲ್ಲಿ ಯಡಿಯೂರಪ್ಪ ಅಪ್ಪ-ಮಕ್ಕಳು ಕಾಣುತ್ತಿಲ್ಲ.
ಬಸವರಾಜ ಹೊರಟ್ಟಿಯವರ 36 ವರ್ಷಗಳ ಸಾಧನೆ ಪ್ರಶ್ನಿಸುವ ಕುಬೇರಪ್ಪನವರು ತಾವು ಸಾಧನೆ ಮಾಡಿದ್ದರ ಕುರಿತು ಪ್ರಜ್ಞಾವಂತ ಮತದಾರರ ಮುಂದೆ ಇಡಲಿ ಎಂದು ಡಾ. ಬಸವರಾಜ ಧಾರವಾಡ, ಗದಗ ಜಿಲ್ಲಾ ಮಾದ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಸ್.ಎಂ. ಕೊಟಗಿ, ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಚಿನ್ನೂರ, ತಾಲೂಕು ಅಧ್ಯಕ್ಷ ಎಂ.ಕೆ. ಲಮಾಣಿ, ಬಿ.ಕೆ. ಪಾಟೀಲ, ಬಿ.ಆರ್. ಪಾಟೀಲ, ಎ.ಎಂ. ಹೊನವಾಡ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕುಬೇರಪ್ಪನವರ ಹೇಳಿಕೆಯನ್ನು ಖಂಡಿಸಿದ್ದಾರೆ.