ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂಕನೂರ ಬೆಂಬಲಿಸಿ: ಜಾಬಣ್ಣವರ

Vishwanath S
Updated On : 16 Jun 2014, 10:49 am

ನರಗುಂದ: ಜೂ. 20ರಂದು ನಡೆಯುವ ಪದವೀಧರ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಎಸ್.ಬಿ. ಸಂಕನೂರ ಉತ್ತಮ ಅಭ್ಯರ್ಥಿಯಾಗಿದ್ದು, ಎಲ್ಲ ಪದವೀಧರರು ಅವರನ್ನು ಬೆಂಬಲಿಸಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ. ಬಿ.ಎಂ. ಜಾಬಣ್ಣವರ ಹೇಳಿದರು.
ಶನಿವಾರ ಪಟ್ಟಣದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪದವೀಧರರ ಚುನಾವಣೆ ನಿಮಿತ್ತ ಮತ ಯಾಚಿಸಿ ನಂತರ ಜರುಗಿದ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ಪದವೀಧರರ ಪರವಾಗಿ ಕಾರ್ಯನಿರ್ವಸುವ ವ್ಯಕ್ತಿ. ಎಲ್ಲ ಪದವೀಧರರು ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಆಯ್ಕೆಗೊಳಿಸಿದರೆ ಪದವೀಧರರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಅವುಗಳನ್ನು ಹೋಗಲಾಡಿಸುವ ಶಕ್ತಿ ಅವರಿಗಿದೆ ಎಂದರು.
ಪ್ರಾ. ಜಿ.ಎಸ್. ಸಾಲೂಟಿಗಿಮಠ, ಜಿ.ಎಸ್. ಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ ಗಡಾದ, ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಬಿ.ಕೆ. ಗುಜಮಾಗಡಿ, ಬಸು ಪಾಟೀಲ, ಗುರುಲಿಂಗಪ್ಪ ಹೊಸಕೇರಿ ಮುಂತಾದವರು ಉಪಸ್ಥಿತರಿದ್ದರು.
ಭೋವಿ ಸಮುದಾಯ ಸಂಘಟಿತವಾಗಲಿ
ಗಜೇಂದ್ರಗಡ: ಸಾಮಾಜಿಕ ಶೈಕ್ಷಣೀಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದ ಭೋವಿ ಸಮುದಾಯ ಸಂಘಟಿತರಾದಾಗ ಮಾತ್ರ ಸಮಾಜದ ಮುಖ್ಯ ವಾಹಿನಿ ತಲುಪಲು ಸಾಧ್ಯ ಎಂದು ಜಿಲ್ಲಾ ಭೋವಿ ನೌಕರ ಸಂಘದ ಅಧ್ಯಕ್ಷ ರವಿ ಗುಂಜಿಕರ ಹೇಳಿದರು.
ಪಟ್ಟಣದ ಸಾಹಿತಿ ಪ್ರೊ. ಎಫ್.ಎಸ್. ಕರಿದುರಗನವರ ನಿವಾಸದಲ್ಲಿ ಈಚೆಗೆ ಸಮಾಜ ಬಾಂಧವರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಾಯಕದೊಂದಿಗೆ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸಿ ವಿಶ್ವಮಾನ್ಯರಾದ ಕರ್ಮಯೋಗಿ ಶಿವಯೋಗಿ ಸಿದ್ಧರಾಮೇಶ್ವರ ಆದರ್ಶ ಪಾಲನೆಯೊಂದಿಗೆ ಬದುಕು ಸಾಗಿಸುತ್ತಿರುವ ಭೋವಿ (ವಡ್ಡರ) ಸಮಾಜ ಬಹುತೇಕ ಕುಟುಂಬಗಳು ಕಲ್ಲು ಒಡೆಯುವ ಹಾಗೂ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರಿದ್ದು, ತಮ್ಮ ಮೂಲ ಕಸುಬನ್ನೆ ನಂಬಿ ಜೀವನ ಸಾಗಿಸುತ್ತಿರುವ ಭೋವಿ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಭೋವಿ ನಿಗಮ ಸ್ಥಾಪಿಸಿ ಭೋವಿ ಜನಾಂಗದ ಕಲ್ಯಾಣಕ್ಕೆ ಶ್ರಮಿಸುತ್ತಿದೆ ಎಂದರು. ಪ್ರೊ. ಎಫ್.ಎಸ್. ಕರಿದುರಗನವರ, ಜಿಲ್ಲಾ ಭೋವಿ ಸಮಾಜ ಅಧ್ಯಕ್ಷ ಯಲ್ಲಪ್ಪ ಸಂದಕದ, ರೋಣ ತಾಲೂಕು ಭೋವಿ (ವಡ್ಡರ) ಸಮಾಜ ಅಧ್ಯಕ್ಷ ಮುದಿಯಪ್ಪ ಮುಧೋಳ, ಯಲ್ಲಪ್ಪ ಬಂಕದ, ಮಾರುತೆಪ್ಪ ಕಲ್ಲೋಡ್ಡರ, ಷಣ್ಮುಕಪ್ಪ ನಿಡಗುಂದಿ, ದುರುಗಪ್ಪ ಬಂಡಿವಡ್ಡರ, ಎಚ್.ಎಸ್. ಬಂಡಿವಡ್ಡರ, ಸಣ್ಣಯಲ್ಲಪ್ಪ ಕರಿದುರುಗನವರ ಇತರರಿದ್ದರು.
ಸಂಕನೂರ ಗೆದ್ದರೆ ಪದವೀಧರರ ಗೆಲವು
ಗದಗ: ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರ ಗೆದ್ದರೆ ಪಶ್ಚಿಮ ಪದವೀಧರ ಮತದಾರರ ಗೆಲವಾಗಲಿದೆ ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಸಿ. ಗಾಣಿಗೇರ ಹೇಳಿದರು. ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಎಂ.ಬಿ.ಪಾಟೀಲ ಪಿಯು ಕಾಲೇಜಿನಲ್ಲಿ ಎಸ್.ವಿ. ಸಂಕನೂರ ಪರ ನಡೆಸಿದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಿ.ಬಿ. ಬಂಡಿ ಮಾತನಾಡಿದರು. ಹಿರೇವಡ್ಡಟ್ಟಿಯ ಜೆ.ಕೆ. ನಂದಿಕೋಲಮಠ ಹಿರಿಯ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಕಲಕೇರಿಯ ಮಧುಕೇಶ್ವರ ಪ್ರೌಢಶಾಲೆ, ಹಮ್ಮಗಿಯ ಕೆವಿಜಿ ಬ್ಯಾಂಕ್, ಹಾರೋಗೇರಿಯ ಮೊರಾರ್ಜಿ ವಸತಿ ಶಾಲೆ, ಬಿಡ್ನಾಳದ ಸರ್ಕಾರಿ ಪ್ರಾಥಮಿಕ ಶಾಲೆ, ಗಂಗಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿಂಗಟಾಲೂರಿನ ಹಿರಿಯ ಪ್ರಾಥಮಿಕ ಶಾಲೆ, ಹಮ್ಮಿಗಿಯ ಯೋಗಿ ವೇಮನ ಪ್ರೌಢಶಾಲೆ ಮುಂತಾದ ಕಡೆಗಳಲ್ಲಿ ಸಂಕನೂರ ಪರವಾದ ಪ್ರಚಾರ ನಡೆಸಲಾಯಿತು. ಬಿ.ಎ. ವಸ್ತ್ರದ, ಎಸ್.ಎಂ. ಕದಡಿ, ಬಿ.ಬಿ. ಹೂಗಾರ ಇತರರಿದ್ದರು.
ಡಾ೤ ನಾಶಿ ಪರ ಮತಯಾಚನೆ
ನರೇಗಲ್ಲ: ಪಟ್ಟಣದ ಪದವೀಧರ ಮತದಾರರ ಮನೆ ಮನೆಗೆ ತೆರಳಿ ಪಶ್ಚಿಮ ಪದವೀಧರ ಮತಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಡಾ೤ ಎ.ಕೆ. ನಾಶಿ ಪರವಾಗಿ ಅವರ ಪತ್ನಿ ಸರ್ವಮಂಗಳಾ ನಾಶಿ ಈಚೆಗೆ ಮತ ಯಾಚಿಸಿದರು.
ಈ ಬಾರಿ ಪದವೀಧರರು ಬದಲಾವಣೆಯನ್ನು ಬಯಸಿದ್ದಾರೆ. ಹೀಗಾಗಿ, ಡಾ೤ ನಾಶಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರು ಪದವೀಧರರ ಸಮಸ್ಯೆ ಬಲ್ಲವರಾಗಿದ್ದು, ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕೆಂದು ಮನವಿ ಮಾಡಿದರು. ಸ್ಥಳಿಯ ಕನಕದಾಸ ಶಿಕ್ಷಣ ಸಮಿತಿಯ ಶೈಕ್ಷಣಿಕ ಸಂಸ್ಥೆಗಳಿಗೆ, ವಿಶ್ವ ಚೇತನ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ವ್ಯಾಪಾರಸ್ಥರ ಮಳಿಗೆಗಳಿಗೆ ತೆರಳಿ, ಪ್ರಚಾರ ಮಾಡಿದರು. ಸುವರ್ಣಾ ಹಿರೇಮಠ, ವಿಜಯಕುಮಾರ ಅಂಗಡಿ, ಶರಣಪ್ಪ ಹಂಜಿ, ಶರಣಪ್ಪ ಗುಡ್ಲಾನೂರ, ಬಸವರಾಜ ತಳವಾರ, ಪ್ರಕಾಶ, ಸುರೇಶ ಹಳ್ಳಿಕೇರಿ ಇದ್ದರು.
ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಸಭೆ
ಗದಗ: ನಗರದ ಸ್ಟೇಶನ್ ರಸ್ತೆಯ ಗದಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರಾರ್ಥ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಸಭೆ ಜರುಗಿತು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಎಂ.ಎಸ್. ಕರಿಗೌಡ್ರ ಮಾತನಾಡಿ, ಪದವೀಧರ ಮತಕ್ಷೇತ್ರದಿಂದ ವಿಪ ಚುನಾವಣೆ ಬಿಜೆಪಿ ಅಭ್ಯರ್ಥಿ ಪ್ರಾ. ಎಸ್.ವಿ. ಸಂಕನೂರರವರ ಗೆಲವಿಗೆ ಎಲ್ಲ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರು ಶ್ರಮಿಸಬೇಕೆಂದರು.
 ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ, ಸಂಘಟನಾ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ, ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಹನಮಂತಪ್ಪ ಅಳವಂಡಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಜಾನು ಲಮಾಣಿ ವಹಿಸಿದ್ದರು. ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ದೊಡ್ಡಮನಿ, ಗದಗ ಶಹರ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಹುಚ್ಚಪ್ಪ ಭಜಂತ್ರಿ, ರೋಣ ತಾಲೂಕು ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಮಲ್ಲಪ್ಪ ಮಾದರ, ಗಣೇಶ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement