ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೊಲೆ: ಮೂವರು ಆರೋಪಿಗಳ ಬಂಧನ

Lingaraj Badiger
Updated On : 17 Jun 2014, 11:15 am

ಗದಗ: ತಾಲೂಕಿನ ಸೊರಟೂರ-ಹಂಗನಕಟ್ಟಿ ಗ್ರಾಮದ ಮಧ್ಯೆ ಇರುವ ಹೊಲದಲ್ಲಿ ಮೇ 24ರಂದು ಸೊರಟೂರ ಗ್ರಾಮದ ನಿವಾಸಿ ಶೇಖಪ್ಪ ನಾಗಪ್ಪ ತಳವಾರ (68) ಕೊಲೆಯಾಗಿದ್ದರು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮುಳಗುಂದ ಪೊಲೀಸ್ ಠಾಣೆಯ ಸಿಬ್ಬಂದಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ.
ಕೊಲೆ ನಡೆದ ಸ್ಥಳದಲ್ಲಿ ಸುಳಿವಿನ ತೊಂದರೆಯಿಂದಾಗಿ ಆರೋಪಿಗಳ ಪತ್ತೆ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಅಂದು ಕೊಲೆಯಾದ ವ್ಯಕ್ತಿಯ ಮೊಬೈಲ್ ನಾಪತ್ತೆಯಾಗಿದ್ದು, ಅದರ ಸುಳಿವು ಆರೋಪಿಗಳನ್ನು ಬಂಧಿಸುವಲ್ಲಿ ಸಹಕಾರಿಯಾಗಿದೆ.
ಆರೋಪಿಗಳು ಹಾಲಗಿಮರೋಳ ಮತ್ತು ನಾದಿಗಟ್ಟಿ ಗ್ರಾಮದವರಾಗಿದ್ದಾರೆ. ಗೋವಿಂದ (ಗೋಪ್ಯಾ) ಪವಾರ, ಜೀವನ್ ಪವಾರ, ರಾಜಾ (ಸನ್ನಿ) ಪವಾರ, ಗೋಪಾಲ ತಂದೆ ಜುಂಜಪ್ಪ ಪವಾರ ಎಂದು ಗುರುತಿಸಲಾಗಿದೆ. ಇವರಲ್ಲಿ ಮೂರು ಜನರನ್ನು ಬಂಧಿಸಲಾಗಿದ್ದು, ಇನ್ನೊಬ್ಬನಿಗಾಗಿ ಶೋಧ ಕಾರ್ಯ ನಡೆದಿದೆ. ತನಿಖೆಯ ವೇಳೆಯಲ್ಲಿ ಈ ಕೊಲೆ ವ್ಯಕ್ತಿಯ ಬಳಿ ಇದ್ದ ರು. 2 ಸಾವಿರ ಹಾಗೂ ಮೊಬೈಲ್ ಫೋನ್‌ಗಾಗಿ ನಡೆದಿದೆ ಎನ್ನಲಾಗಿದ್ದು, ಈ ಆರೋಪಿಗಳು ಇದಕ್ಕೂ ಪೂರ್ವದಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಪ್ರಕರಣ ಭೇದಿಸುವಲ್ಲಿ ಮುಳಗುಂದ ಪಿಎಸ್‌ಐ ಪರಮೇಶ್ವರ ಕವಟಗಿ, ಎಎಸ್‌ಐ ಐ.ಬಿ. ತಹಸೀಲ್ದಾರ, ಹವಾಲ್ದಾರ್ ದೇವೇಂದ್ರ ಬೆಂತೂರ, ಸಿಬ್ಬಂದಿಗಳಾದ ಬಸವರಾಜ ಗುಡ್ಲಾನೂರ, ಮಹಾವೀರ ಸದರನ್ನವರ, ದಾದಾಖಲಂದರ ನದಾಫ, ಬಸವರಾಜ ಬಿಳೆಹಾಳ, ಮಂಜುನಾಥ ಬಾರಕೇರ, ಫಕೀರಪ್ಪ ನಾಯ್ಕರ, ನಿಂಗಪ್ಪ ಹುಬ್ಬಳ್ಳಿ, ಪರಸಪ್ಪ ದೊಡ್ಡಮನಿ, ಶಿವಕುಮಾರ ಹೊಂಬಾಳಿಮಠ, ಎ.ಬಿ. ದಿಂಡೂರ, ಗುರುರಾಜ ಬೂದಿಹಾಳ, ಆನಂದ ದೊಡ್ಡಮನಿ ಮುಂತಾದವರು ಶ್ರಮಿಸಿದ್ದು, ಸಿಬ್ಬಂದಿಗೆ ಎಸ್ಪಿ ಕೆ.ಟಿ. ಬಾಲಕೃಷ್ಣ ಬಹುಮಾನ ಘೋಷಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement