ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೈತರಿಗೆ ಸಾಲ ಸೌಲಭ್ಯ ಕಲ್ಪಿಸಿ: ರಡ್ಡಿ

Lingaraj Badiger
Updated On : 17 Jun 2014, 11:14 am

ಗದಗ: ಕೃಷಿಕರಿಗೆ ಹಸಿರು ಮನೆ ಮತ್ತು ಪಾಲಿ ಹೌಸ್‌ನಂತಹ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅಗತ್ಯವಾದ ಸಾಲ ಸೌಲಭ್ಯ ನೀಡಬೇಕೆಂದು ಬ್ಯಾಂಕಿನ ಶಾಖಾಧಿಕಾರಿಗಳಿಗೆ ಕೆವಿಜಿ ಬ್ಯಾಂಕಿನ ಅಧ್ಯಕ್ಷ ಎನ್. ಅಶೋಕ ರಡ್ಡಿ ಹೇಳಿದರು.
ಅವರು ಸೋಮವಾರ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಗದಗ ಪ್ರಾದೇಶಿಕ ಕಚೇರಿಯ ವ್ಯಾಪ್ತಿಯಲ್ಲಿ ಬರುವ ಶಾಖಾಧಿಕಾರಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕೆವಿಜಿ ಬ್ಯಾಂಕ್ ನೂತನವಾಗಿ ಜಾರಿಗೆ ತಂದಿರುವ ಗ್ರೀನ್‌ಹೌಸ್ ಮತ್ತು ಪಾಲಿ ಹೌಸ್‌ಗಳಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಗದಗ ಜಿಲ್ಲೆಯ ರೈತರು ಮನಸ್ಸು ಮಾಡಿ ಲಭ್ಯವಿರುವ ವೈವಿಧ್ಯಮಯ ಮತ್ತು ಫಲವತ್ತತೆಯಿಂದ ಮಣ್ಣಿನಿಂದಲೇ ಕೂಡಿದ ಗರಿಷ್ಠ ಪ್ರಮಾಣದ ಆದಾಯ ಪಡೆಯಲು ಸಾಧ್ಯ. ಖಾಸಗಿ ಬಡ್ಡಿ ವ್ಯವಹಾರ ಮಾಡುವ ವ್ಯಕ್ತಿಗಳಿಂದ ಬಡವರನ್ನು ರಕ್ಷಿಸುವುದಕ್ಕಾಗಿ ಜಾರಿಗೆ ತಂದಿರುವ ವಿಕಾಸ ಜನಶಕ್ತಿ ಸಾಲ ನೀಡುವಲ್ಲಿ ಶಾಖಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಈ ತಂತ್ರಜ್ಞಾನ ಅಳವಡಿಕೆಯಿಂದ ರೈತರು ಅಲ್ಪ ನೀರಾವರಿ ಮತ್ತು ಅತ್ಯಲ್ಪ ಜಮೀನಿನಲ್ಲಿ ಸಹ ಉತ್ತಮ ಇಳುವರಿ ಹಾಗೂ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಿದೆ ಎಂದರು.
ಬ್ಯಾಂಕಿನ ನಿರ್ದೇಶಕ ಎಸ್.ಎಂ. ಗೋಪಾಲ, ಗದಗ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಪ್ರಬಂಧಕ ರಾಜಶೇಖರ ಅಡಿಕೇನವರ ಮಾತನಾಡಿದರು. ಈ ವರ್ಷ ಗುರಿ ಮೀರಿ ಸಾಧನೆ ಮಾಡಿದ ಸಾಧಕರಿಗೆ ಈ ಸಂದರ್ಭದಲ್ಲಿ ಗೌರವ ನೀಡಿ ಸನ್ಮಾನಿಸಲಾಯಿತು. ಪ್ರಾದೇಶಿಕ ಪ್ರಬಂಧಕ ರಾಜಶೇಖರ ಅಡಿಕೇನವರ ಸ್ವಾಗತಿಸಿದರು. ಹಿರಿಯ ಪ್ರಬಂಧಕ ಎಸ್.ಜಿ. ಹಿರೇಮಠ ನಿರೂಪಿಸಿದರು. ಮುಖ್ಯ ಪ್ರಬಂಧಕ ಬಿ.ಟಿ. ಪೈ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement