ಡಿಜಿ ಇಮೇಜ್-2014 ಪ್ರಚಾರ ಸಾಮಗ್ರಿ ಬಿಡುಗಡೆ
ಗದಗ: ಗದಗ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ, ವಿವಿಧೋದ್ದೇಶಗಳ ಸಂಘದ ಕಾರ್ಯಕಾರಿಣಿ ಸಭೆ, ಕರ್ನಾಟಕ ಛಾಯಾಗ್ರಾಹಕರ ಸಂಘದ ಜುಲೈ 17, 18, 19ರಂದು ಬೆಂಗಳೂರಿನಲ್ಲಿ ನಡೆಯುವ 2ನೇ ವರ್ಷದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಡಿಜಿ ಇಮೇಜ್-2014ರ ಪ್ರಚಾರ ಸಾಮಗ್ರಿ ಬಿಡುಗಡೆ ಕಾರ್ಯಕ್ರಮ ಭಾನುವಾರ ನಗರದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಜರುಗಿತು. ಸಂಘದ ಅಧ್ಯಕ್ಷ ಎಸ್.ಎಸ್. ಗೌಡರ ಸಿಡಿ ಬಿಡುಗಡೆ ಮಾಡಿದರು. ಉಪಾಧ್ಯಕ್ಷರಾದ ದಿಲೀಪ ಮುಂಡರಗಿ ಪೊಸ್ಟರ್ ಬಿಡುಗಡೆ ಮಾಡಿದರು. ಮುಂಡರಗಿ ತಾಲೂಕು ನಿರ್ದೇಶಕರು, ಕನ್ನಡಪ್ರಭ ಉಪಸಂಪಾದಕ ಸಲೀಂ ಬಳಬಟ್ಟಿ ಪ್ರವೇಶ ಪಾಸ್ ಬಿಡುಗಡೆಗೊಳಿಸಿದರು. ಎಸ್. ಪರಮೇಶ, ಎ.ಎಂ. ಮುರಳಿ, ಸಂಪತ್‌ಕುಮಾರ, ಶಂಕರ ಗುರಿಕಾರ, ರೈಮಾನಸಾಬ್ ಬಳಬಟ್ಟಿ, ಉದಯ ಮುದೋಳೆ ಇತರರಿದ್ದರು.