ಪದವೀಧರರ ಮತದಾನ ಸಂವಿಧಾನ ಗೌರವಿಸಿದಂತೆ: ಕೋರೆ
ಗದಗ: ಪಶ್ಚಿಮ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪ್ರಬುದ್ಧ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಸಂಕನೂರ ಈ ಕ್ಷೇತ್ರಕ್ಕೆ ಆಯ್ಕೆಯಾದಲ್ಲಿ ವೈಚಾರಿಕವಾಗಿ ವಿಮರ್ಶಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು. ಮಂಗಳವಾರ ನಗರದ ಕೆಎಲ್‌ಇ ಸಂಸ್ಥೆಯ ಜ. ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರು ಹಾಗೂ ಪದವೀಧರರನ್ನುದ್ದೇಶಿಸಿ ಮಾತನಾಡಿದರು. ಮಾಜಿ ಶಾಸಕ ಸಿ.ಎಸ್. ಮುತ್ತಿನಪೆಂಡಿಮಠ, ಮಹಾಂತೇಶ ಕವಟಗಿಮಠ, ಸ್ಥಾನಿಕ ಸಮಿತಿ ಚೇರ್‌ಮನ್ ಕುರಗೋಡ, ಶಂಕ್ರಣ್ಣ ಮುನವಳ್ಳಿ, ಈಶಣ್ಣ ಮುನವಳ್ಳಿ, ಎಸ್.ಬಿ. ಸಂಕಣ್ಣವರ, ಎಚ್.ವೈ. ದೇಸಾಯಿಗೌಡರ, ಬಸವರಾಜ ತೋಟದ, ಅಶೋಕ ನಿಲುಗಲ್ಲ, ಬಸಣ್ಣ ಮಲ್ಲಾಡದ, ವಿ.ಎಸ್. ಕೂಗು, ಗಂಗಣ್ಣ ಕೋಟಿ, ಎಂ.ಎಸ್. ಕರಿಗೌಡ್ರ, ಸದಾನಂದ ಪಿಳ್ಳೆ, ಶ್ರೀನಿವಾಸ ಹುಬ್ಬಳ್ಳಿ, ಶ್ರೀಪತಿ ಉಡುಪಿ, ಎಸ್.ಟಿ. ಮೇಲಗಿರಿ, ಕಾಂತಿಲಾಲ ಬನ್ಸಾಲಿ, ಶಂಕ್ರಪ್ಪ ಇಂಡಿ, ಅಂಬರೀಶ ಅಂಗಡಿ, ಸಂತೋಷ ಮೇಲಗಿರಿ, ಮಂಜು ಮ್ಯಾಗೇರಿ, ನಾಮದೇವ ಚಿಕ್ಕಣ್ಣವರ, ಮಹಾಂತೇಶ ನಾಲ್ವಾಡ, ರಾಜು ಕುರಡಗಿ, ಪ್ರಶಾಂತ ನಾಯ್ಕರ, ಅರವಿಂದ ಹುಲ್ಲೂರ, ರಮೇಶ ಬಾಲಪ್ಪನವರ ಮುಂತಾದವರು ಇದ್ದರು.