ಅಂಬೇಡ್ಕರ್ ಹೆಸರಿಡಿ
ಗದಗ: ನಗರದ ಮಲ್ಲಸಮುದ್ರ ರಸ್ತೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಮೆಡಿಕಲ್ ಕಾಲೇಜಿಗೆ ಡಾ. ಬಿ.ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿ ಮಂಗಳವಾರ ಜೈ ಭೀಮ ಸಂಘರ್ಷ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಕಾರ್ಯದರ್ಶಿ ಅಶೋಕ ಹಾದಿಮನಿ, ಸುರೇಶ ಹೊಸಮನಿ, ಓಬಳೇಶ ಯಶವಂತಪುರ, ಪರಶುರಾಮ ಪಾತ್ರೋಟ, ಪ್ರವೀಣ ರಾಮಗಿರಿ ಉಪಸ್ಥಿತರಿದ್ದರು.