ಕ್ಯಾಂಪಸ್ ಸಂದರ್ಶನ
ಗದಗ: ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಸಭಾಭವನದಲ್ಲಿ ಜೂ. 20 ಹಾಗೂ 21 ಐ.ಟಿ. ಕಂಪನಿಗಳಾದ ಸಿ.ಎಂ.ಸಿ ಲಿಮಿಟೆಡ್ ಟಾಟಾ ಸಹಭಾಗಿತ್ವದ ಸಂಸ್ಥೆ, ಬೆಂಗಳೂರು ಮತ್ತು ಜೂ. 21ರಂದು ಎಂಡ್ಯೂರ್ ಇನ್ಫೋಟೆಕ್ ಬೆಂಗಳೂರು ವತಿಯಿಂದ ಕ್ಯಾಂಪಸ್ ಸಂದರ್ಶನ ಜರುಗಲಿದೆ. ಎಂಜಿನಿಯರಿಂಗ್ ಪಾಸಾದ ಅಥವಾ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಈ ಕ್ಯಾಂಪಸ್ ಸಂದರ್ಶನ ಜರುಗಲಿದ್ದು, ಆಸಕ್ತ ಎಲ್ಲ ವಿಭಾಗದ (ಸಿ.ಎಸ್, ಐ.ಎಸ್, ಇ,ಸಿ, ಇ,ಇ ಹಾಗೂ ಎಂ.ಸಿ.ಎ) ವಿದ್ಯಾರ್ಥಿಗಳು ಕಾಲೇಜಿನ ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಪ್ರೊ. ಶಿವಯೋಗಿ ಪಾಟೀಲ್ (9480370941) ಇವರನ್ನು ಸಂಪರ್ಕಿಸಿ ಹೆಸರನ್ನು ನೊಂದಾಯಿಸಲು ಕಾಲೇಜಿನ ಪ್ರಾಚಾರ್ಯ ಡಾ. ಪ್ರಕಾಶ ಹುಬ್ಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ವಿಜ್ಞಾನ ಕಾರ್ಯಾಗಾರ
ಗದಗ: ಜೂ. 19ರಂದು ಬೆಳಗ್ಗೆ 11 ಗಂಟೆಗೆ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿಯಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಇವರು ವಿಭಾಗಮಟ್ಟದ ವಿಜ್ಞಾನ ಕಾರ್ಯಾಗಾರವನ್ನು ಏರ್ಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.