ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭಾರಿ ಮಳೆ: ಜನ ಜೀವನ ಅಸ್ತವ್ಯಸ್ತ

Lingaraj Badiger
Updated On : 19 Jun 2014, 11:04 am

ಶಿರಸಿ: ಕಳೆದೊಂದು ವಾರದಿಂದ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ಬುಧವಾರ ಘಟ್ಟದ ಮೇಲಿನ ಪ್ರದೇಶದಲ್ಲಿ ಅಬ್ಬರಿಸಿದೆ. ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಘಟ್ಟದ ಮೇಲಿನ ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಮಂಗಳವಾರ ರಾತ್ರಿಯಿಂದಲೇ ಮಳೆ ಅಬ್ಬರದಿಂದ ಸುರಿಯುತ್ತಿರುವ ಪರಿಣಾಮ ಜನ ಜೀವನಕ್ಕೆ ತೊಂದರೆ ಉಂಟಾಗಿದೆ. ಮಳೆಯ ಅಬ್ಬರದಿಂದಾಗಿ ಅಘನಾಶಿನಿ, ಶಾಲ್ಮಲಾ ನದಿಗಳು ಮೈದುಂಬಿ ಹರಿಯುತ್ತಿವೆ. ಗ್ರಾಮೀಣ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿತ್ತು.
ಈ ವರ್ಷ ವಾಡಿಕೆಗಿಂತ ವಿಳಂಬವಾಗಿ ಮಳೆ ಸುರಿಯಲು ಆರಂಭಗೊಂಡಿದೆ. ವಾರದಿಂದ ಮಳೆ ಸುರಿಯುತ್ತಿದ್ದರೂ ಮಂಗಳವಾರ ಸಂಜೆ ಮಳೆ ವೇಗ ಪಡೆದುಕೊಂಡಿದೆ. ಬುಧವಾರ ಮುಂಜಾನೆಯಿಂದಲೇ ಮಳೆ ಎಡಬಿಡದೇ ಸುರಿಯಲು ಆರಂಭಿಸಿದೆ. ಮಳೆಯಿಂದಾಗಿ ಕೃಷಿ ಕಾರ್ಯ ಚುರುಕು ಪಡೆದಿದೆ. ಶಿರಸಿ-ಸಿದ್ದಾಪುರ ತಾಲೂಕಿಗೆ ಹೋಲಿಕೆ ಮಾಡಿದರೆ ಘಟ್ಟದ ಮೇಲಿನ ಇತರ ತಾಲೂಕುಗಳಾದ ಮುಂಡಗೋಡ, ಹಳಿಯಾಳ, ಯಲ್ಲಾಪುರ ಹಾಗೂ ಜೋಯಿಡಾಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಮಳೆಯಿಂದಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಅಡಕೆ ಬೆಳೆಗಾರರು ಔಷಧಿ ಸಿಂಪಡಣೆಯಲ್ಲಿ ನಿರತರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement