ಶಾಂತಿಯುತ ಸಮಾಜ ನಿರ್ಮಾಣವಾಗಲಿ: ಇಬ್ರಾಹಿಂ ಸುತಾರ
ಗದಗ: ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ನೆಲೆಸಲು ಸರ್ವರಲ್ಲಿ ಸಹೋದರತೆ, ಭಾತೃತ್ವ ಅಗತ್ಯ. ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಮುಂದಾಗಬೇಕೆಂದು ಕನ್ನಡದ ಕಬೀರ, ಸೂಫಿ ಸಂತ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾಲಿಂಗಪುರದ ಇಬ್ರಾಹಿಂ ಸುತಾರ ಅಭಿಪ್ರಾಯಪಟ್ಟರು. ನಗರದ ಗಂಗಾಪುರಪೇಟೆಯ ದುರ್ಗಾದೇವಿ ಜಾತ್ರಾ ಮಹೋತ್ಸವ ನಮ್ಮೂರ ದೇವಿಯ ಜಾತ್ರೆ ಕಾರ್ಯಕ್ರಮದ ಮಾಲಿಕೆಯಲ್ಲಿ ಭಾವೈಕ್ಯ ಭಕ್ತಿ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಧು, ಸಂತರು, ಶರಣರು, ಮೌಲ್ವಿಗಳು, ಪಾದ್ರಿಗಳು ಸರ್ವ ಸಮುದಾಯದ ಧರ್ಮ ಗುರುಗಳು ಸಮಾಜದ ಓರೆ ಕೋರೆಗಳನ್ನು ತಿದ್ದುವ ಮೂಲಕ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿದ್ದಾರೆ. ಅವರ ತತ್ವ ಸಂದೇಶಗಳು ಸರ್ವ ಕಾಲಕ್ಕೂ ಅನ್ವಯಿಸುವಂತಹ ಮೌಲ್ಯಯುತ ವಾಣಿಗಳಾಗಿವೆ. ಅವುಗಳನ್ನು ಗೌರವಿಸುವ ಜೀವನದಲ್ಲಿ ಅಳವಡಿಕೊಂಡು ಮುನ್ನಡೆಯುವ ಕಾರ್ಯ ನಮ್ಮೆಲ್ಲರಿಂದ ಆಗಬೇಕಿದೆ ಎಂದರು. ಜಾತ್ರಾ ಸಮಿತಿ ಅಧ್ಯಕ್ಷ ವೀರಜೀಬಾಯಿ ಪಟೇಲ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಬೆಳಧಡಿ, ಸಿದ್ದಣ್ಣ ಪಲ್ಲೇದ, ಎಸ್.ಎಸ್. ಚೌಹಾಣ್, ಹನುಮಂತಪ್ಪ ಕಕ್ಕೇರಿ, ಶ್ರೀನಿವಾಸ ವಲ್ಲೂರ, ವೆಂಕಪ್ಪ ರೆಡ್ಡಿ, ಮಹಾಂತೇಶ ಅರಗಂಜಿ, ಮೋಹನ ಇಮರಾಪುರ, ಆನಂದ ಬೆಳಧಡಿ, ಹನುಮಂತಪ್ಪ ಮುಂಡರಗಿ, ಬಸವರಾಜ ಇಕ್ಕಲಗುತ್ತಿ, ಷಣ್ಮುಖಪ್ಪ ತೋಟದ, ರವಿ ಮಾನೇದ, ಮಹಾದೇವಪ್ಪ ಜಡಿ, ಬಸಪ್ಪ ಮುದಕಟ್ಟಿ, ರಾಜು ಬುರಬುರೆ, ಎಂ.ಎಸ್. ಪಾಟೀಲ, ಎಫ್.ಎಂ. ಮುದೇಗೊಣ್ಣವರ, ಕೃಷ್ಣಾ ಕೋರ್ಪಡೆ, ನಾರಾಯಣ ಬದಿ, ಬಸಪ್ಪ ಶಿರೂರು, ನಾಗರಾಜ ಕಲಾಲ, ಬಸವರಾಜ ಅಣ್ಣಿಗೇರಿ ಇದ್ದರು.