ಆಧುನಿಕ ಬೇಸಾಯ ಅಗತ್ಯ: ಡಾ. ಹಲಗಲಿಮಠ
ಲಕ್ಷ್ಮೇಶ್ವರ: ರೈತರು ಆಧುನಿಕ ಮತ್ತು ವೈಜ್ಞಾನಿಕ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಬೆಳೆಯನ್ನು ಬೆಳೆದು, ಲಾಭ ಮಾಡಿಕೊಳ್ಳಬಹುದಾಗಿದೆ ಎಂದು ಧಾರವಾಡದ ಕೃಷಿ ವಿವಿಯ ಬೇಸಾಯ ತಜ್ಞ ಡಾ. ಹಲಗಲಿಮಠ ಹೇಳಿದರು. ಸಮಿಪದ ಶಿಗ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೀಜೋಪಚಾರ ಕ್ರಮಗಳು ಹಾಗೂ ಕೀಟ, ರೋಗ ಬಾಧೆ ಹತೋಟಿ ಕ್ರಮಗಳ ಕುರಿತ ಪ್ರಾತ್ಯಕ್ಷಿಕೆ ಆಂದೋಲನ ಹಾಗೂ ಕಾರ್ಯಾಗಾರದಲ್ಲಿ ಮಾತನಾಡಿದರು. ಕೀಟ ರೋಗ ನಿಯಂತ್ರಣ ತಜ್ಞೆ ಡಾ. ಶಾಲಿನಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ಬಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿಡಿದರು. ಕೃಷಿ ನಿರ್ದೇಶಕ ಎಸ್.ಬಿ. ಪಾಟೀಲ, ತಾಪಂ ಅಧ್ಯಕ್ಷೆ ಸುನಂದಮ್ಮ ಬಿದರಳ್ಳಿ, ಜಿಪಂ ಸದಸ್ಯೆ ನಿರ್ಮಲಾ ಬರದೂರ, ಗ್ರಾಪಂ ಅಧ್ಯಕ್ಷ ಡಿ.ವೈ. ಹುನಗುಂದ, ಕೆ.ಎ. ನದಾಫ್, ಕೃಷಿಕ ಸಮಾಜದ ಅಧ್ಯಕ್ಷ ಬಸಣ್ಣ ಹಂಜಿ, ಸೋಮು ಲಮಾಣಿ ಹಾಜರಿದ್ದರು.