ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಎಲ್ಲರೂ ನೇತ್ರದಾನ ಮಾಡಿ

Rashmi Kasaragodu
Updated On : 22 Jun 2014, 12:45 pm

ಗಜೇಂದ್ರಗಡ: ಮನುಷ್ಯನ ಅಂಗಾಂಗಳಲ್ಲಿ ಕಣ್ಣು ಅತ್ಯಂತ ಶ್ರೇಷ್ಠತೆ ಹೊಂದಿದ್ದು, ನೇತ್ರದಾನದಂತಹ ಪುಣ್ಯ ಕಾರ್ಯಕ್ಕೆ ಪ್ರತಿಯೊಬ್ಬರು ಮುಂದಾಗಿ ಅಂಧತ್ವ ನಿವಾರಣೆಗೆ ಪಣತೊಡಿ ಎಂದು ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಎಚ್. ಲೋಹಿತ್ ಹೇಳಿದರು.
ಅವರು ಇತ್ತೀಚೆಗೆ ರಾಷ್ಟ್ರೀಯ ಅಂಧತ್ವ ನಿರ್ವಹಣಾ ಚಿಕಿತ್ಸಾ ಹಾಗೂ ಶಸ್ತ್ರ ಚಿಕಿತ್ಸಾ ಸಂಸ್ಥೆ ಗದಗ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಗಜೇಂದ್ರಗಡ ಹಾಗೂ ಸರ್ಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜರುಗಿದ ನೇತ್ರ ಉಚಿತ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ರಂಗಪ್ಪ ರೋಣ, ಸರೋಜಾ ಕಮರಗುಡ್ಡಿ ಮಾತನಾಡಿದರು. ನೂರಾರು ರೋಗಿಗಳಿಗೆ ನೇತ್ರ ಉಚಿತ ತಪಾಸಣೆ ಜತೆ ಚಿಕಿತ್ಸೆ ನೀಡಲಾಯಿತು. ಶೋಭಾ ಜಾನಾಯಿ, ಅಶ್ವಿನಿ ಹದ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement