ಚಿಕ್ಕವಡ್ಡಟ್ಟಿಗೆ ಗ್ರಾಪಂ ಮಂಜೂರು ಮಾಡಿ
ಮುಂಡರಗಿ: ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮ ಪಂಚಾಯಿತಿಯನ್ನು ವಿಭಜಿಸುವ ಸಂದರ್ಭದಲ್ಲಿ ಚಿಕ್ಕವಡ್ಡಟ್ಟಿ, ಗುಡ್ಡದ ಬೂದಿಹಾಳ, ಮುರುಡಿ, ಮಾರುತಿನಗರ, ಕೇಲೂರು ಗ್ರಾಮಗಳನ್ನು ಸೇರಿಸಿ ಗ್ರಾಮ ಪಂಚಾಯಿತಿಮಂಜೂರು ಮಾಡಬೇಕೆಂದು ಆಗ್ರಹಿಸಿ ಚಿಕ್ಕವಡ್ಡಟ್ಟಿ ಸುತ್ತಮುತ್ತಲಿನ ಗ್ರಾಮಸ್ಥರು ಈಚೆಗೆ ಜಿಪಂ ಸಿಇಒ ವೀರಣ್ಣ ತುರಮರಿಗೆ ಮನವಿ ಸಲ್ಲಿಸಿದರು. ಚಿಕ್ಕವಡ್ಡಟ್ಟಿ ಗ್ರಾಮವು ಗುಡ್ಡದ ಬೂದಿಹಾಳ, ಮುರುಡಿ, ಮಾರುತಿನಗರ, ಕೇಲೂರು ಗ್ರಾಮಗಳಿಗಿಂತ ಅಧಿಕ ಜನಸಂಖ್ಯೆ ಹೊಂದಿದೆ. ಮುಂಡರಗಿ ಕೇಂದ್ರ ಸ್ಥಾನದಿಂದ ದೂರವಿದೆ. ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮವಾಗಿದೆ. ಕಾರಣ ಈ ಗ್ರಾಮವನ್ನು ಪಂಚಾಯಿತಿ ಮಂಜೂರಾತಿಗೆ ಒಳಪಡಿಸಬೇಕೆಂದು ಮನವಿಯಲ್ಲಿ ತಿಳಿಸಿದೆ. ಗ್ರಾಪಂ ಸದಸ್ಯ ಬಸವರಾಜ ಸುಲ್ತಾನಪುರ, ಅಡಿವೆಪ್ಪ ಕಂಪ್ಲಿ, ಹನುಮಂತಗೌಡ ಪಾಟೀಲ, ಗಣೇಶಗೌಡ ಅಯ್ಯನಗೌಡರ, ಕಲ್ಲನಗೌಡ ಪರಂಗಿ, ರಾಮಚಂದ್ರ ಬದಾಮಿ ಇದ್ದರು.