ಪಿಯು ಪಠ್ಯಪುಸ್ತಕ ಶೀಘ್ರ ವಿತರಿಸಿ
ಗಜೇಂದ್ರಗಡ: ಪಿಯುಸಿ ವಿದ್ಯಾರ್ಥಿಗಳಿಗೆ ಶೀಘ್ರ ಪಠ್ಯಪುಸ್ತಕ ವಿತರಿಸಬೇಕು ಎಂದು ಒತ್ತಾಯಿಸಿ ಎಸ್‌ಎಫ್‌ಐ ಕಾರ್ಯಕರ್ತರು ಸ್ಥಳೀಯ ಕಾಲಕಾಲೇಶ್ವರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಶನಿವಾರ ಪ್ರತಿಭಟನೆ ನಡೆಸಿದರು. ತಹಸೀಲ್ದಾರ್ ಪಿ.ಬಿ. ಮೇಲಿನಮನಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಶಿವಾಜಿ ಗಡ್ಡದ, ಪ್ರಕಾಶ ಹೆಳವರ, ಶರಣಯ್ಯ ಸೊಗಿರಯ್ಯನಮಠ, ಅಶೋಕ ಉಕ್ಕಿಸಲ, ಧರ್ಮಣ್ಣ ಹಾದಿಮನಿ, ಮಂಜು ಜಾಧವ, ಕವಿತಾ ಬಂಕದ, ಮಹೇಶ ಹವಾಲ್ದಾರ ಪ್ರತಿಭಟನೆಯಲ್ಲಿದ್ದರು.
ರೇಲ್ವೆ ಪ್ರಯಾಣ ದರ ಏರಿಕೆ: ಪ್ರತಿಕೃತಿ ದಹನ
ಗಜೇಂದ್ರಗಡ: ರೇಲ್ವೆ ಪ್ರಯಾಣ ದರ ಏರಿಕೆ ಖಂಡಿಸಿ ಭಾರತ್ ಕಮ್ಯುನಿಷ್ಟ ಪಕ್ಷ ನಗರ ಸಮಿತಿ ನೇತೃತ್ವದಲ್ಲಿ ಸ್ಥಳೀಯ ಕಾಲಕಾಲೇಶ್ವರ ವೃತ್ತದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಪ್ರತಿಕೃತಿ ದಹಿಸಿ ಶನಿವಾರ ಪ್ರತಿಭಟನೆ ನಡೆಸಿದರು. ಬಸವರಾಜ ಶೀಲವಂತರ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಪ್ರಜೆಗಳಿಗೆ ನೀಡಿದ ವಾಗ್ವಾದ ಮರೆತು ವಚನಭ್ರಷ್ಟ ಸರ್ಕಾರ ಎಂಬುದು ಸಾಬೀತುಪಡಿಸಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬೆಲೆ ಏರಿಸದೆ ಬೆಲೆ ನಿಯಂತ್ರಣ ಮಾಡುವ ಮೂಲಕ ಉತ್ತಮ ಆಡಳಿತ ನೀಡುತ್ತೇವೆ ಎಂದು ನರೇಂದ್ರ ಮೋದಿ ಬುರುಡೆ ಬಿಟ್ಟಿದ್ದಾರೆ ಎಂದರು. ಬಾಲು ರಾಠೋಡ, ಎಂ.ಬಿ. ಸೋಂಪುರ, ಮೈಬು ಹವಾಲ್ದಾರ್, ದಾವಲ ತಾಳಿಕೋಟಿ, ಆರ್.ಕೆ. ಗೊಡೇಕಾರ, ಎಸ್.ಎಫ್. ತೋಟದ ಇದ್ದರು.