ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪಿಯುಸಿ ಪಠ್ಯಪುಸ್ತಕ ಶೀಘ್ರ ವಿತರಿಸಿ: ಪ್ರತಿಭಟನೆ

Rashmi Kasaragodu
Updated On : 22 Jun 2014, 12:41 pm

ಗದಗ: ರಾಜ್ಯ ಸರ್ಕಾರ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತಕ್ಷಣ ವಿತರಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ಕೆವಿಎಸ್‌ಆರ್ ಕಾಲೇಜು ಘಟಕ, ಕೆವಿಎಸ್‌ಆರ್ ಕಾಲೇಜು ಆವರಣದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಮುಖಾಂತರ ಹಾತಲಗೇರಿ ನಾಕಾದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಶನಿವಾರ ಪ್ರತಿಭಟನೆ ನಡೆಸಿದರು. ರಾಜ್ಯ ಉಪಾಧ್ಯಕ್ಷ ಬಸವರಾಜ ಪೂಜಾರ ಮಾತನಾಡಿ, ಸರ್ಕಾರ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ಆಧಿಕಾರಕ್ಕೆ ಬಂದು ವರ್ಷವಾದರೂ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಪಡಿಸಿಲ್ಲ. ಪಠ್ಯಪುಸ್ತಕ ದೊರೆಯದಿದ್ದುದರಿಂದ ಶಿಕ್ಷಣ ಕಲಿಯುವುದು ಹೇಗೆ ಎಂದು ಆರೋಪಿಸಿದರು. ಶಿವಾನಂದ ಬೋಸ್ಲೆ, ಶಿವು ಚವ್ಹಾಣ ಮಾತನಾಡಿದರು. ಶಿವು ಪೂಜಾರ. ಸುರೇಶ, ಮಂಜು, ಕನಕಪ್ಪ, ಮಂಜುನಾಥ ಕುಬೇರ, ಸಂತೋಷ ಯಮನೂರ, ಚೇತನಕುಮಾರ, ಸಕ್ರಪ್ಪ ಮಾಳೋತ್ತರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement