ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಿಎಸ್ಸೆನ್ನೆಲ್ ಟವರ್ ಹೆಚ್ಚಿಸಲು ಮನವಿ

Rashmi Kasaragodu
Updated On : 22 Jun 2014, 12:40 pm

ಗದಗ: ಗದಗ-ಬೆಟಗೇರಿ ಅವಳಿ ನಗರದ ವ್ಯಾಪಾರ ವಹಿವಾಟಿಗಾಗಿ ಸುತ್ತಲಿನ ಊರುಗಳ ಜತೆಗೆ ರಾಜ್ಯ, ಅಂತರಾಜ್ಯ ಮಟ್ಟದಲ್ಲಿ ವಹಿವಾಟು ಇದೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ, ಕೆ.ಸಿ. ರಾಣಿ ರೋಡ ಮತ್ತು ಅವಳಿ ನಗರದ ಅನೇಕ ಕಡೆ ಸೂಕ್ತ ಸಂಪರ್ಕ ದೊರೆಯುತ್ತಿಲ್ಲ. ಅನೇಕ ಕಂಪನಿಗಳು ಇದ್ದರೂ ಅವಳಿ ನಗರದಲ್ಲಿ ಬಿಎಸ್ಸೆನ್ನೆಲ್ ಸೇವೆ ಮುಂಚೂಣಿಯಲ್ಲಿದೆ. ನಗರದ ವ್ಯಾಪಾರಸ್ಥರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಿಎಸ್ಸೆನ್ನೆಲ್ ಗ್ರಾಹಕರಾಗಿದ್ದಾರೆ. ಸಂಪರ್ಕ ತೊಂದರೆಯಿಂದಾಗಿ ಗ್ರಾಹಕರು ಪರದಾಡುವಂತಾಗಿದೆ. ಕೂಡಲೇ ಹೆಚ್ಚಿನ ಆಸಕ್ತಿ ವಹಿಸಿ ನಗರದಲ್ಲಿ ಸಂಪರ್ಕ ದೊರೆಯದಿರುವಂಥ ಭಾಗಗಳಲ್ಲಿ ಟವರ್ ಹೆಚ್ಚಳ ಮಾಡಿ ಬಿಎಸ್ಸೆನ್ನೆಲ್ ಮೊಬೈಲ್ ಸೇವೆ ಗೆ ಅನುಕೂಲ ಮಾಡಿಕೊಡಬೇಕೆಂದು ಜನರಲ್ ಮ್ಯಾನೇಜರ್ ಭಾರತೀಯ ದೂರಸಂಪರ್ಕ ನಿಗಮ ನಿಯಮಿತ ಹುಬ್ಬಳ್ಳಿ ಇವರಿಗೆ ಸಂಸ್ಥೆ ಅಧ್ಯಕ್ಷ ಎಲ್.ಬಿ. ಲಿಂಬಯ್ಯ ಸ್ವಾಮಿಮಠ, ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement