ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬೀಜ ಉಚಿತ ವಿತರಣೆ ನಾಳೆ

Rashmi Kasaragodu
Updated On : 22 Jun 2014, 12:45 pm

ಗದಗ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಶ್ರೀ ಆರ್ಗ್ಯಾನಿಕ್ ಫಾರ್ಮ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ವತಿಯಿಂದ ಅಪ್ಪಚ್ಚಿ, ಕಾಟನ್, ಪೊಲ್ಲಾಚಿ ಕಂಪನಿಯಿಂದ ಕೊಡಮಾಡಲ್ಪಟ್ಟಿರುವ ಸರ್ಜಿಕಲ್ ಕಾಟನ್ ಬೀಜಗಳನ್ನು ಸಾವಯವ ದೃಢೀಕರಣ ಹೊಂದಿದ ಎಲ್ಲ ಸದಸ್ಯರಿಗೆ ಜೂ. 23ರಂದು ಬೆಳಗ್ಗೆ 11ಕ್ಕೆ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಅಧ್ಯಕ್ಷ ಸಿ.ಆರ್. ಬೂದಿಹಾಳ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಗದಗ ಜಿಲ್ಲಾ ಜಂಟಿ ನಿರ್ದೇಶಕ ಬಾಲರಡ್ಡಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಗದಗ ಘಟಕದ ವಿಸ್ತರಣಾಧಿಕಾರಿ ಡಾ. ಎಸ್.ಪಿ. ಹಲಗಲಿಮಠ ಆಗಮಿಸುವರು. ರೈತರಿಗೆ ಸಿರಿ ಧಾನ್ಯಗಳ ಬೆಳೆಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಲಾಗುವುದು. ಸಾವಯವ ಕೃಷಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಸದುಪಯೋಗಪಡಿಸಿಕೊಳ್ಳಲು ಸಂಸ್ಥೆಯ ಕಾರ್ಯದರ್ಶಿ ಜಿ.ಸಿ. ಕೊರವನವರ ತಿಳಿಸಿದ್ದಾರೆ.



ಗದಗ: ನಾಳೆ ಆರ್‌ಟಿಇ ಕಾರ್ಯಪಡೆ ಉದ್ಘಾಟನೆ
ಗದಗ: ರಾಜ್ಯದಲ್ಲಿ 2012ರಿಂದ ಜಾರಿಗೊಳಿಸಲಾಗಿರುವ ಮಕ್ಕಳ ಕಡ್ಡಾಯ ಶಿಕ್ಷಣ ಕಾಯ್ದೆಯ ಅನುಷ್ಠಾನಕ್ಕಾಗಿ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆರ್‌ಟಿಇ ಕಾರ್ಯಪಡೆಯ ಘಟಕವನ್ನು ಜೂ. 23ರ ಬೆಳಗ್ಗೆ 11ಕ್ಕೆ ಜಿಲ್ಲಾಡಳಿತ ಭವನದಲ್ಲಿನ ಜಿಪಂ ಸಭಾಂಗಣದಲ್ಲಿ ಉದ್ಘಾಟನೆ ಜರುಗಲಿದೆ. ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಉಮೇಶ ಆರಾಧ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಉಪನಿರ್ದೇಶಕರು, ಗದಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಸಂಬಂಧಿತ ಸೇವಾ ಸಂಸ್ಥೆಗಳು ಇದರಲ್ಲಿ ಭಾಗವಹಿಸುವರು ಎಂದು ಗದಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭಾರತಿ ಶೆಟ್ಟರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement