ಮಕ್ಕಳ ರಕ್ಷಣೆಯಲ್ಲಿ ಜಾಗೃತಿ ವಹಿಸಿ: ಡುಲ್ಸೀನ್
ಗದಗ: ಮಕ್ಕಳ ರಕ್ಷಣೆ ಮಾಡುವಲ್ಲಿ ಮಾಧ್ಯಮದವರ ಪಾತ್ರ ಪ್ರಮುಖ ಎಂದು ಯುನಿಸೆಫ್ ಪ್ರತಿನಿಧಿ ಸಿಸ್ಟರ್ ಡುಲ್ಸೀನ್ ಹೇಳಿದರು. ಶನಿವಾರ, ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗಾಗಿ ಏರ್ಪಡಿಸಿದ್ದ ಮಕ್ಕಳ ರಕ್ಷಣೆ ಪೋಷಣೆಯಲ್ಲಿ ಮಾಧ್ಯಮದ ಪ್ರತಿನಿಧಿಗಳ ಪಾತ್ರದ ಕಾರ್ಯಾಗಾರದಲ್ಲಿ ಅರಿವು ಮತ್ತು ಸಾಮರ್ಥ್ಯ ಬಲವರ್ಧನೆ ಕುರಿತು ಮಾತನಾಡಿ, ಮಾಧ್ಯಮ ಪ್ರತಿನಿಧಿಗಳು ಮಕ್ಕಳ ಕುರಿತ ಹಕ್ಕು ಬಾಧ್ಯತೆ ಹಾಗೂ ಕಾಯ್ದೆಗಳ ಕುರಿತು ಮಾಹಿತಿ, ಜವಾಬ್ದಾರಿ ಹೊಂದುವುದು ಅಗತ್ಯವಿದೆ ಎಂದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಜಿ.ಸಿ. ರೇಷ್ಮೆ ಬಾಲ ನ್ಯಾಯ ಕಾಯ್ದೆ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭಾರತಿ ಶೆಟ್ಟರ್ ಸ್ವಾಗತಿಸಿ, ಮಕ್ಕಳ ರಕ್ಷಣೆ, ಕಾಳಜಿ, ಅವರ ಆರೋಗ್ಯಕರ ಬೆಳವಣಿಗೆ ಜಾರಿಗೊಳಿಸಿದ ಹಲವಾರು ಯೋಜನೆಗಳ ಕುರಿತು ಮಾಹಿತಿ ನೀಡಿದರು.