ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳಿಗೆ ಇತಿಹಾಸ ತಿಳಿಸಿ: ಕುಷ್ಟಗಿ

Rashmi Kasaragodu
Updated On : 22 Jun 2014, 12:41 pm

ನರಗುಂದ:  ಭಾರತ ದೇಶದ ಉಳವಿಗಾಗಿ, ರಕ್ಷಣೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿ ಹೋರಾಟ ಮಾಡಿದಂತ ವೀರರ ಇತಿಹಾಸ ಇಂದಿನ ಮಕ್ಕಳಿಗೆ ತಿಳಿಸುವ ಕಾರ್ಯ ಆಗಬೇಕೆಂದು ನಿವೃತ್ತ ಪ್ರಾಚಾರ್ಯ ಎಸ್.ಬಿ. ಕುಷ್ಟಗಿ ಹೇಳಿದರು. ತಾಲೂಕಿನ ಭೈರನಹಟ್ಟಿ ಗ್ರಾಮದ ದೊರಸ್ವಾಮಿ ವಿರಕ್ತಮಠದ ಆವರಣದಲ್ಲಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ನರಗುಂದದ ವೀರ ಬಾಬಾಸಾಹೇಬರ 156ನೇ ಸ್ಮರಣೋತ್ಸವದಲ್ಲಿ ಮಾತನಾಡಿದರು. ದೇಶದ ಇತಿಹಾಸ ಬಹಳ ಪ್ರಸಿದ್ಧವಾದದ್ದು. ಭವ್ಯ ಭಾರತ ಸಂಸ್ಕೃತಿ ಯಾರು ಆಕ್ರಮಣ ಮಾಡಿದರೂ ತನ್ನ ಸೊಗಡು ಕಳೆದುಕೊಳ್ಳಲಿಲ್ಲ ಎಂದರು. ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಹೆಬ್ಬಾಳದ ವೀರೇಶ ದೇವರ, ಜಿಪಂ ಅಧ್ಯಕ್ಷೆ ಎಸ್.ಸಿ. ದಂಡಿನ, ಗ್ರಾಪಂ ಉಪಾಧ್ಯಕ್ಷ ಪಿ.ಆರ್. ಐನಾಪುರ, ಡಿ.ಎಚ್. ಅಜ್ಜಿ, ಪಿ.ಸಿ. ಕಲಕೇರಿ, ಎಚ್.ಬಿ. ಅಸೂಟಿ, ಪಿ.ಎಸ್. ಅಣ್ಣೆಗೇರಿ, ಚಂದ್ರಗೌಡ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement