ಮಳೆರಾಯನಿಗಾಗಿದೇವರಿಗೆ ಉಡಿ
ನರಗುಂದ: ಕಳೆದ ಹಲವು ದಿನಗಳಿಂದ ನರಗುಂದ ಪಟ್ಟಣ ಸೇರಿದತೆ ತಾಲೂಕಿನಾದ್ಯಂತ ಮಳೆಯಾಗದೇ ಇರುವುದರಿಂದ ರೈತರು, ರೈತಮಹಿಳೆಯರು ಮಳೆಗಾಗಿ ಪ್ರಾರ್ಥಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವರುಣನಿಗೆ ಪ್ರಾರ್ಥಿಸುವುದು ತಾಲೂಕಿನಾದ್ಯಂತ ಕಾಣಸಿಗುತ್ತಿದೆ. ಅದರಂತೆ ಈಚೆಗೆ ಪಟ್ಟಣದ ದಂಡಾಪೂರ ಓಣಿಯ ಜನತೆ ಪಟ್ಟಣದ ಮಾರುತೇಶ್ವರ ದೇವಸ್ಥಾನದಿಂದ ಐವರು ಜೋಗತಿಯರ ನೇತೃತ್ವದಲ್ಲಿ ಪಟ್ಟಣದಲ್ಲಿರುವ ದೇವಿಗೆ ಉಡಿ ತುಂಬುವ ಕಾರ್ಯ ನೆರವೇರಿಸಿದರು.