ಶಿಕ್ಷಣ ಸಂಸ್ಥೆ ಪಕ್ಕದ ಬಾರ್ ಸ್ಥಳಾಂತರಿಸಿ
ಗದಗ: ಬೆಟಗೇರಿಯ ಶಿವರತ್ನ ಕ್ಯಾಂಪಸ್ ಎದುರಿಗೆ 40 ಮೀಟರ್ ಅಂತರದಲ್ಲಿರುವ ಜಾಗದಲ್ಲಿ ನೂತನ ಬಾರ್ ಅಂಗಡಿ ಪ್ರಾರಂಭವಾಗಿದ್ದು, ರಾಜ್ಯ ಹೆದ್ದಾರಿಯಲ್ಲಿರುವ ಮತ್ತು ಬೆಟಗೇರಿ ಭಾಗದಲ್ಲಿರುವ ಶಿವರತ್ನ ಕ್ಯಾಂಪಸ್ನ ಶಾಲಾ ಕಾಲೇಜುಗಳಿದ್ದು, ಅದರ ಎದುರಿಗೆ ನೇರವಾಗಿರುವ ಈ ಬಾರ್ ಅಂಗಡಿ ಇರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಶಾಲಾ ಮಕ್ಕಳ ಮತ್ತು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ದಿನನಿತ್ಯ ಬಸ್ಗಾಗಿ ನಿಲ್ಲುವ ಜಾಗವಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಬಾರ್ ಅಂಗಡಿ ಸ್ಥಳಾಂತರಿಸಬೇಕು. ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಆಮಿಷಕ್ಕೆ ಒಳಗಾಗಿ ಸ್ಥಳಾಂತರಿಸದಿದ್ದರೆ ಕನ್ನಡ ಜನಾಭಿವೃದ್ಧಿ ವೇದಿಕೆಯು ವಿದ್ಯಾರ್ಥಿಗಳ ಜತೆ ಕೂಡಿ ಕಾನೂನಾತ್ಮಕ ಹಾಗೂ ಬಹಿರಂಗವಾಗಿ ಉಗ್ರವಾದ ಹೋರಾಟ ಮಾಡುವುದಾಗಿ ಕನ್ನಡ ಜನಾಭಿವೃದ್ಧಿ ವೇದಿಕೆಯ ರಾಜ್ಯಾಧ್ಯಕ್ಷ ಹುಲ್ಲೇಶ ಭಜಂತ್ರಿ, ವೀರೇಶ, ಮುತ್ತು, ವಿನಾಯಕ, ಗಣೇಶ, ನಾಗರಾಜ ಆಗ್ರಹಿಸಿದ್ದಾರೆ.